ಪ್ರಯಾಣಿಕರ ಗಮನಕ್ಕೆ….ಇಂದು ಈ ಮಾರ್ಗದಲ್ಲಿ ಮೆಟ್ರೋ ಸಂಚಾರ ಬಂದ್

ಬೆಂಗಳೂರು: ಮೆಟ್ರೋ ಪ್ರಯಾಣಿಕರ ಗಮನಕ್ಕೆ ಬಿ.ಎಂ.ಆರ್.ಸಿ.ಎಲ್ ಮಹತ್ವದ ಪ್ರಕಟಣೆ ಹೊರಡಿಸಿದೆ. ಇಂದು ಇಡೀ ದಿನ ಬೆಂಗಳೂರಿನ ಕೆ.ಆರ್.ಪುರ ಹಾಗೂ ಗರುಡಾಚಾರ್ ಪಾಳ್ಯ ನಡುವೆ ಮೆಟ್ರೋ ಸಂಚಾರ ಇರುವುದಿಲ್ಲ ಎಂದು ತಿಳಿಸಿದೆ.

ಹೊಸದಾಗಿ ನಿರ್ಮಿಸಲಾದ ಕೆ.ಆರ್.ಪುರ ಹಾಗೂ ಬೈಯಪ್ಪನಹಳ್ಳಿ ನಡುವಿನ ನಮ್ಮ ಮೆಟ್ರೋ ಮಾರ್ಗದ ಸುರಕ್ಷತಾ ಪರಿಶೀಲನೆ ನಡೆಯಲಿರುವ ಹಿನ್ನೆಲೆಯಲ್ಲಿ ಇಂದು ಕೆ.ಆರ್.ಪುರ-ಗರುಡಾಚಾರ್ ಪಾಳ್ಯ ಈ ಮಾರ್ಗದಲ್ಲಿ ಮೆಟ್ರೋ ಸಂಚಾರ ಬಂದ್ ಆಗಿದೆ.

ಬೈಯಪ್ಪನಹಳ್ಳಿಯಿಂದ ಇಂದಿರಾನಗರ ಮೆಟ್ರೋ ನಿಲ್ದಾಣದವರೆಗೆ ಮಧ್ಯಾಹ್ನ 1:30ರಿಂದ 4:30ರವರೆಗೆ ಮೆಟ್ರೋ ರೈಲು ಸಂಚಾರ ಸ್ಥಗಿತಗೊಳ್ಳಲಿದೆ.

ಉಳಿದಂತೆ ವೈಟ್ ಫೀಲ್ಡ್ (ಕಾಡುಗೋಡಿ) ಮತ್ತು ಗರುಡಾಚಾರ್ ಪಾಳ್ಯ ನಡುವೆ ರೈಲ್ವೆ ಸೇವೆ ಎಂದಿನಂತೆ ಇರಲಿದೆ. ಇಂದಿರಾನಗರ-ಕೆಂಗೇರಿ ನಡುವೆ ಮಧ್ಯಾಹ್ನ 1:30ರಿಂದ ಸಂಜೆ 4:30ರವರೆಗೆ ಮೆಟ್ರೋ ಲಭ್ಯವಿರಲಿದೆ. ಬೈಯಪ್ಪನಹಳ್ಳಿ-ಕೆಂಗೇರಿ ನಡುವೆ ಸಂಜೆ 4:30ರ ಬಳಿಕ ರಾತ್ರಿ 11ಗಂಟೆವರೆಗೆ ಮೆಟ್ರೋ ಸಂಚಾರ ಲಭ್ಯವಿರಲಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read