ಬೆಂಗಳೂರು ಮೆಟ್ರೋದಲ್ಲಿ ಅನುಚಿತ ವರ್ತನೆ; ಯುವ ಜೋಡಿಯ ಚುಂಬನ ವರ್ತನೆಗೆ ಆಕ್ರೋಶ

ಪ್ರಯಾಣಿಕರ ವರ್ತನೆಯಿಂದ ಪದೇ ಪದೇ ಸುದ್ದಿಯಾಗ್ತಿದ್ದ ದೆಹಲಿ ಮೆಟ್ರೋದಂತೆ ಇದೀಗ ಬಿ ಎಂ ಆರ್ ಸಿ ಎಲ್ ಮೆಟ್ರೋ ಕೂಡ ಪ್ರಯಾಣಿಕರ ವರ್ತನೆಗೆ ಗುರಿಯಾಗಿದೆ.

ಬೆಂಗಳೂರು ಮೆಟ್ರೋದಲ್ಲಿ ಯುವ ಜೋಡಿಯೊಂದು ಅಸಭ್ಯವಾಗಿ ವರ್ತಿಸಿದ್ದು ಸಾರ್ವಜನಿಕರು ಕ್ರಮಕ್ಕೆ ಆಗ್ರಹಿಸಿದ್ದಾರೆ. ಜೊತೆಗೆ ಸಾರ್ವಜನಿಕ ಪ್ರದೇಶದಲ್ಲಿ ಹೆಚ್ಚಾಗುತ್ತಿರುವ ಯುವ ಪ್ರಯಾಣಿಕರ ಅಶಿಸ್ತಿನ ವರ್ತನೆಯ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮೆಟ್ರೋದಲ್ಲಿ ಯುವ ಜೋಡಿ ವರ್ತಿಸಿದ ರೀತಿಯನ್ನು ಖಂಡಿಸಿ ವಿಡಿಯೋವೊಂದನ್ನ ಸಾಮಾಜಿಕ ಜಾಲತಾಣದಲ್ಲಿ ಹರಿಬಿಡಲಾಗಿದೆ.

ವಿಡಿಯೋದಲ್ಲಿ ಕಾಣಿಸಿರುವಂತೆ ಮೆಟ್ರೊ ರೈಲಿನಲ್ಲಿ ಯುವತಿಯೊಬ್ಬಳು ಹುಡುಗನನ್ನ ಚುಂಬಿಸಿದ್ದಾಳೆ. ಈ ಘಟನೆಯು ಸಾರ್ವಜನಿಕ ಸ್ಥಳಗಳಲ್ಲಿ ಸಭ್ಯತೆ ಮತ್ತು ಗೌರವವನ್ನು ಕಾಪಾಡಿಕೊಳ್ಳುವ ಅಗತ್ಯತೆಯ ಬಗ್ಗೆ ಕಳವಳವನ್ನು ಉಂಟುಮಾಡಿದ್ದು ಪ್ರಯಾಣಿಕರೊಬ್ಬರು ಟ್ವಿಟ್ಟರ್‌ನಲ್ಲಿ ಬೆಂಗಳೂರು ಮೆಟ್ರೋ ರೈಲು ಕಾರ್ಪೊರೇಷನ್ ಲಿಮಿಟೆಡ್ (@ಅಧಿಕೃತBMRCL), ನಮ್ಮ ಮೆಟ್ರೋ (@NammaMetro_), ಮತ್ತು ಬೆಂಗಳೂರು ಸಿಟಿ ಪೊಲೀಸ್ (@BlrCityPolice) ಗೆ ವಿಡಿಯೋ ಟ್ಯಾಗ್ ಮಾಡಿ ಕ್ರಮಕ್ಕೆ ಆಗ್ರಹಿಸಿದ್ದಾರೆ.

https://twitter.com/Sam459om/status/1787134569872855179?ref_src=twsrc%5Etfw%7Ctwcamp%5Etweetembed%7Ctwterm%5E1787134569872855179%7Ctwgr%5Ef9cacafa8b9c1f0c1532a2473a49230adf789a1f%7Ctwcon%5Es1_&ref_url=https%3A%2F%2Fwww.timesnownews.com%2Fbengaluru%2Fbengaluru-video-of-couple-kissing-in-namma-metro-surfaces-police-responds-article-109884999

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read