‘ನಮ್ಮ ಮೆಟ್ರೋ’ ಪ್ರಯಾಣ ಬಲು ದುಬಾರಿ : ಟಿಕೆಟ್ ದರ ಇಳಿಕೆಗೆ ಬಿಜೆಪಿ ನಿಯೋಗ ಆಗ್ರಹ

ಬೆಂಗಳೂರು : ಬೆಂಗಳೂರು ನಗರದ ಬಿಜೆಪಿ ನಿಯೋಗವೊಂದು ಸೋಮವಾರ ಬಿಎಂಆರ್ ಸಿಎಲ್ ಅಧಿಕಾರಿಗಳನ್ನು ಭೇಟಿ ಮಾಡಿ ಮೆಟ್ರೋ ಪ್ರಯಾಣ ದರವನ್ನು ಇಳಿಕೆ ಮಾಡುವಂತೆ ಮನವಿ ಮಾಡಿದೆ.ಟಿಕೆಟ್ ದರ ಹೆಚ್ಚಳವು ಸಾಮಾನ್ಯ ಜನರ ಜೇಬನ್ನು ಸುಡುತ್ತದೆ ಮತ್ತು ಮೆಟ್ರೋ ದುಬಾರಿ ಸಾರಿಗೆಯನ್ನಾಗಿ ಮಾಡುತ್ತದೆ , ಮತ್ತೆ ಹಳೆಯ ದರಗಳನ್ನು ಜಾರಿಗೆ ತರುವಂತೆ ಅವರು ನಮ್ಮ ಮೆಟ್ರೋ ಅಧಿಕಾರಿಗಳನ್ನು ಕೇಳಿದರು.

ಈ ಕುರಿತು ಹೇಳಿಕೆ ಬಿಡುಗಡೆ ಮಾಡಿರುವ ಬಿಜೆಪಿ, “ರಾಜ್ಯದ ಕಾಂಗ್ರೆಸ್ ಸರ್ಕಾರವು ಮೆಟ್ರೋ ರೈಲಿನ ಶುಲ್ಕವನ್ನು ಹೆಚ್ಚಿಸಿದೆ. ಇದು ಬೆಂಗಳೂರು ನಗರದ ಜನರಿಗೆ ದೊಡ್ಡ ಆಘಾತವಾಗಿದೆ. ರಾಜ್ಯ ಸರ್ಕಾರವು ಬೆಂಗಳೂರು ನಗರದ ನಾಗರಿಕರ ಮೇಲೆ ಒಂದರ ನಂತರ ಒಂದರಂತೆ ಶುಲ್ಕ ಹೆಚ್ಚಳವನ್ನು ಹೇರುತ್ತಿರುವುದು (ಜನವರಿಯಲ್ಲಿ ಬಿಎಂಟಿಸಿ ಬಸ್ ದರವನ್ನು ಸಹ ಹೆಚ್ಚಿಸಲಾಗಿದೆ) ಅವರ ಜನವಿರೋಧಿ ಉದ್ದೇಶಗಳನ್ನು ಬಹಿರಂಗಪಡಿಸಿದೆ. ಒಂದೂವರೆ ವರ್ಷದ ಕಾಂಗ್ರೆಸ್ ಆಡಳಿತದಲ್ಲಿ ಜನರು ವಿವಿಧ ಸೇವೆಗಳ ಶುಲ್ಕ ಹೆಚ್ಚಳವನ್ನು ಮಾತ್ರ ನೋಡಿದ್ದಾರೆ ಆದರೆ ಸೇವೆಗಳ ಗುಣಮಟ್ಟವನ್ನು ಸುಧಾರಿಸಲು ಸಾಧ್ಯವಾಗಿಲ್ಲ ಎಂದಿದೆ.

50 ಅಲ್ಲ 60 ಅಲ್ಲ 100 ಪರ್ಸೆಂಟ್ಗೂ ಹೆಚ್ಚು ಮೆಟ್ರೋ ಪ್ರಯಾಣ ದರ ಏರಿಕೆ ಮಾಡಿದ ಲೂಟಿಕೋರ ಕಾಂಗ್ರೆಸ್ ಸರ್ಕಾರ. ಕನ್ನಡಿಗರ ತೆರಿಗೆ ಹಣವನ್ನು ಲೂಟಿ ಮಾಡಿ ಖಜಾನೆ ಖಾಲಿ ಮಾಡಿರುವ ಭ್ರಷ್ಟಾತಿ ಭ್ರಷ್ಟ ಸಿದ್ದರಾಮಯ್ಯ ಸರ್ಕಾರ ಇದೀಗ ಪ್ರಯಾಣಿಕರ ಜೀಬಿನಿಂದ ರಾಜಾರೋಷವಾಗಿ ಪಿಕ್ ಪಾಕೆಟ್ ಮಾಡುತ್ತಿದೆ. 28 ರೂ. ಇದ್ದ ಟಿಕೆಟ್ ಪ್ರಯಾಣ ದರ ಇದೀಗ 60 ರೂ.ಗೆ ಏರಿಕೆ ಮಾಡಲಾಗಿದೆ. ಇದು 100 ಪರ್ಸೆಂಟ್ ಲೂಟಿ ಸರ್ಕಾರ ಎಂದು ಬಿಜೆಪಿ ಕಿಡಿಕಾರಿದೆ.

 

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read