BREAKING NEWS: ಪ್ರಯಾಣಿಕರಿಗೆ ಸಮಾಧಾನಕರ ಸುದ್ದಿ: ಮೆಟ್ರೋ ಪ್ರಯಾಣ ದರ ಇಳಿಸಲು ನಿರ್ಧಾರ!

ಬೆಂಗಳೂರು: ನಮ್ಮ ಮೆಟ್ರೋ ಪ್ರಯಾಣಿಕರಿಗೆ ಬಿ.ಎಂ.ಆರ್.ಸಿ.ಎಲ್ ಸಮಾಧಾನಕರ ಸುದ್ದಿ ನೀಡಿದೆ. ಮೆಟ್ರೋ ಪ್ರಯಾಣ ದರ ಇಳಿಸಲು ನಿರ್ಧರಿಸಿದೆ.

ಮೆಟ್ರೋ ಪ್ರಯಾಣ ದರ ಹೆಚ್ಚಳ ಹಿನ್ನೆಲೆಯಲ್ಲಿ ಭಾರಿ ಜನಾಕ್ರೋಶ ವ್ಯಕ್ತವಾಗಿತ್ತು. ಅಲ್ಲದೇ ಮೆಟ್ರೋ ಪ್ರಯಾಣಿಕರ ಸಂಖ್ಯೆಯಲ್ಲಿಯೂ ದಿಢೀರ್ ಕುಸಿತವಾಗಿತ್ತು. ಮೆಟ್ರೋ ಪ್ರಯಾಣ ದರ ಇಳಿಸುವಂತೆ ಸಿಎಂ ಸಿದ್ದರಾಮಯ್ಯ ಕೂಡ ಸೂಚನೆ ನೀಡಿದ್ದರು.

ಈ ಎಲ್ಲಾ ಬೆಳವಣಿಗೆ ಬೆನ್ನಲ್ಲೇ ಮೆಟ್ರೋ ಪ್ರಯಾಣ ದರ ಇಳಿಸಲು ಬಿ.ಎಂ.ಆರ್.ಸಿ.ಎಲ್ ನಿರ್ಧರಿಸಿದೆ. ಶೇ.100, 90 ಹೀಗೆ ಜಂಪ್ ಆಗಿದ್ದ ಪ್ರಯಾಣ ದರ ಇಳಿಸಲು ತೀರ್ಮಾನಿಸಲಾಗಿದೆ. ಎಲ್ಲೆಲ್ಲಿ ಪ್ರಯಾಣ ದರ ಇಳಿಸಲು ಸಾಧ್ಯವೋ ಅಲ್ಲಲ್ಲಿ ದರ ಇಳಿಸಲಾಗುವುದು ಎಂದು ಬಿ.ಎಂ.ಆರ್.ಸಿ.ಎಲ್ ಎಂಡಿ ಮಹೇಶ್ವರ್ ರಾವ್ ತಿಳಿಸಿದ್ದಾರೆ.

ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿದ ಬಿ.ಎಂ.ಆರ್.ಸಿ.ಎಲ್ ಎಂಡಿ ಮಹೇಶ್ವರ್ ರಾವ್, ಮೆಟ್ರೋ ಪ್ರಯಣ ದರ ಪರಿಷ್ಕರಣೆ ಇಲ್ಲ. ಆದರೆ ಸ್ಟೇಜ್ ಆಧಾರದಲ್ಲಿ ದರ ಇಳಿಸಲಾಗುವುದು. ಈಗಾಗಲೇ ಮೆಟ್ರೋಗೆ ಸಾಕಷ್ಟು ಬಂಡವಾಳ ಹೂಡಿಕೆ ಮಾಡಲಾಗಿದೆ. ನಮ್ಮ ಮೆಟ್ರೋ ಸಿಬ್ಬಂದಿಗೆ ವೇತನ ನೀಡಬೇಕಾಗಿದೆ. ಆ ನಿಟ್ಟಿನಲ್ಲಿ ದರ ಏರಿಕೆ ಮಾಡಲಾಗಿತ್ತು. ಜನಾಭಿಪ್ರಾಯ ವ್ಯಕ್ತವಾದ ಹಿನ್ನೆಲೆಯಲ್ಲಿ ಎಲ್ಲೆಲ್ಲೆ ಮೆಟ್ರೋ ಪ್ರಯಾಣ ದರ ಕಡಿಮೆ ಮಾಡಲು ಸಾಧ್ಯವೋ ಅಲ್ಲಿ ಕಡಿಮೆ ಮಾಡಲಾಗುವುದು ಎಂದು ಸ್ಪಷ್ಟಪಡಿಸಿದರು.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read