ಬೆಂಗಳೂರು : ಬಿಜೆಪಿಯ ಟಿಕೆಟ್ ಹಗರಣದಲ್ಲಿ ಹಲವು ತಿಮಿಂಗಿಲಗಳ ಹೆಸರು ಬಹಿರಂಗವಾಗುತ್ತಿದೆ ಎಂದು ಕಾಂಗ್ರೆಸ್ ಟ್ವೀಟ್ ಮೂಲಕ ಬಿಜೆಪಿಗೆ ಟಾಂಗ್ ನೀಡಿದೆ.
ಬಿಜೆಪಿಯ ಟಿಕೆಟ್ ಹಗರಣದಲ್ಲಿ ಹಲವು ತಿಮಿಂಗಿಲಗಳ ಹೆಸರು ಬಹಿರಂಗವಾಗುತ್ತಿದೆ. ಬಿಜೆಪಿಯ ಬಾಡಿಗೆ ಭಾಷಣಕಾರರು, ಖಾವಿ ವೇಷದಾರಿ ವಂಚಕರು ಇದರಲ್ಲಿ ತಳುಕು ಹಾಕಿಕೊಂಡಿದ್ದಾರೆ.s
ಕಾರ್ಕಳ ಸುನಿಲ್ ಹೆಸರು ಬಹಿರಂಗವಾದ ನಂತರ CT ರವಿ ಅವರಿಗೆ ಈ ವಂಚನೆಯ ಸಂಗತಿ ಮೊದಲೇ ಗೊತ್ತಿತ್ತು, ಬಿಜೆಪಿಗೂ ಪಕ್ಷಕ್ಕೂ ಗೊತ್ತಿತ್ತು ಎಂಬ ಸತ್ಯ ಹೊರಬಿದ್ದಿದೆ. ಹಣದ ಅಕ್ರಮ ವಹಿವಾಟು ನಡೆದಿದ್ದು, ಪಕ್ಷದ ಹೆಸರಲ್ಲಿ ಅಕ್ರಮ ನಡೆದಿದ್ದರೂ, ಹಣದ ವಂಚನೆ ನಡೆದಿದ್ದರೂ ಸಿ ಟಿ ರವಿ ಸುಮ್ಮನಿದ್ದಿದ್ದು ಏಕೆ? ಅ ಮೌನದಲ್ಲಿ ಇನ್ನೂ ಹೆಚ್ಚಿನ ನಿಗೂಢತೆ ಇದೆಯೇ ಬಿಜೆಪಿ ಎಂದು ಕಾಂಗ್ರೆಸ್ ಟ್ವೀಟ್ ಮೂಲಕ ಬಿಜೆಪಿಗೆ ಟಾಂಗ್ ನೀಡಿದೆ.
https://twitter.com/INCKarnataka/status/1704051635444400192