ರಾಘವ ಲಾರೆನ್ಸ್ ನಿರ್ದೇಶನದ ನಾಗಾರ್ಜುನ ನಟನೆಯ ‘ಮಾಸ್’ ಎಂಬ ತೆಲುಗು ಚಿತ್ರ 2004 ಡಿಸೆಂಬರ್ 24 ರಂದು ತೆರೆ ಕಾಣುವ ಮೂಲಕ ಬಾಕ್ಸ್ ಆಫೀಸ್ ನಲ್ಲಿ ಭರ್ಜರಿ ಕಲೆಕ್ಷನ್ ಮಾಡಿತ್ತು. ಈ ಚಿತ್ರ ಬಿಡುಗಡೆಯಾಗಿ ಇಂದಿಗೆ 20 ವರ್ಷಗಳಾಗಿದ್ದು, ಈ ಸಂತಸವನ್ನು ಚಿತ್ರತಂಡ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದೆ.
ಈ ಚಿತ್ರವನ್ನು ಅನ್ನಪೂರ್ಣ ಸ್ಟುಡಿಯೋಸ್ ಬ್ಯಾನರ್ ನಲ್ಲಿ ನಾಗಾರ್ಜುನ ನಿರ್ಮಾಣ ಮಾಡಿದ್ದು, ದೇವಿ ಶ್ರೀ ಪ್ರಸಾದ್ ಅವರ ಸಂಗೀತ ನಿರ್ದೇಶನವಿದೆ. ನಾಗಾರ್ಜುನ ಸೇರಿದಂತೆ ಜ್ಯೋತಿಕಾ, ಚಾರ್ಮಿ ಕೌರ್, ರಘುವರನ್, ರಾಹುಲ್ ದೇವ್, ಪ್ರಕಾಶ್ ರಾಜ್, ಧರ್ಮವರಪು ಸುಬ್ರಮಣ್ಯಂ, ಬಾಲಯ್ಯ, ವೇಣು ಮಾಧವ್, ಸತ್ಯಂ ರಾಜೇಶ್, ಅಪೂರ್ವ, ರುತಿಕಾ, ತೆರೆ ಹಂಚಿಕೊಂಡಿದ್ದು, ಮಾರ್ತಾಂಡ್ ಕೆ.ವೆಂಕಟೇಶ್ ಅವರ ಸಂಕಲನ ಹಾಗೂ ಶ್ಯಾಮ್ ಕೆ. ನಾಯ್ಡು ಛಾಯಾಗ್ರಹಣವಿದೆ.