ಒಂದೇ ದಿನದಲ್ಲಿ ಮುನಿರತ್ನ ಬಂಧಿಸಿದವರು ಒಂದು ತಿಂಗಳಿಂದ ಶಾಸಕ ಚನ್ನಾರೆಡ್ಡಿ ಬಂಧಿಸಿಲ್ಲವೇಕೆ…? ರವಿಕುಮಾರ್ ಪ್ರಶ್ನೆ

ಬೆಂಗಳೂರು: ಕರ್ನಾಟಕ ರಾಜ್ಯದಲ್ಲಿ ಪ್ರಜಾಪ್ರಭುತ್ವ ಎಲ್ಲಿದೆ ಎಂದು ವಿಧಾನ ಪರಿಷತ್ ಸದಸ್ಯ ಎನ್. ರವಿಕುಮಾರ್ ಅವರು ಪ್ರಶ್ನಿಸಿದ್ದಾರೆ.

ಮಾಧ್ಯಮ ಪ್ರತಿನಿಧಿಗಳ ಜೊತೆ ಇಂದು ಮಾತನಾಡಿದ ಅವರು, ಜಾತ್ಯತೀತ, ಪ್ರಜಾಪ್ರಭುತ್ವವಾದಿ, ಸಂವಿಧಾನ ಯಥಾವತ್ ಜಾರಿಗೊಳಿಸುವ ಸರ್ಕಾರ ಎಂದು ಕಾಂಗ್ರೆಸ್ಸಿಗರು ಹೇಳಿಕೊಳ್ಳುತ್ತಾರೆ. ಬಿಜೆಪಿ ಶಾಸಕ ಮುನಿರತ್ನ ಅವರ ಮೇಲೆ ಅಟ್ರಾಸಿಟಿ ಕೇಸ್ ಆಗಿದ್ದು, ಬಂಧಿಸಿದ್ದೀರಾ ಒಕೆ. ಆದರೆ, ಒಂದು ತಿಂಗಳಿಗೂ ಹಿಂದೆ ಇದೇ ಅಟ್ರಾಸಿಟಿ ಕೇಸ್ ಕಾಂಗ್ರೆಸ್ ಶಾಸಕ ಚನ್ನಾರೆಡ್ಡಿ ಮೇಲೂ ಆಗಿದೆ. ಎಲ್ಲ ಕಾರ್ಯಕ್ರಮಗಳಲ್ಲಿ ರಾಜಾರೋಷವಾಗಿ ಭಾಗವಹಿಸುವ ಅವರನ್ನು ಇನ್ನೂ ಏಕೆ ಬಂಧಿಸಿಲ್ಲ? ಇದೇನಾ ನಿಮ್ಮ ಪ್ರಜಾಪ್ರಭುತ್ವ? ಇದಾ ನಿಮ್ಮ ಸೆಕ್ಯುಲರಿಸಂ, ಇದಾ ನಿಮ್ಮ ಸಂವಿಧಾನ ಮಾನ್ಯ ಸಿದ್ದರಾಮಯ್ಯನವರೇ ಎಂದು ಕೇಳಿದ್ದಾರೆ.

ನಾಗಮಂಗಲದಲ್ಲಿ ಗಣಪತಿ ಹಬ್ಬ ಮಾಡುವ, ಮೆರವಣಿಗೆ ಹೋಗುವ ಹಿಂದೂ ಯುವಕರ ಮೇಲೆ ನೂರಾರು ಕಲ್ಲು ಎಸೆದುದಲ್ಲದೆ, ಗಣಪತಿ ಮೂರ್ತಿ ಮೇಲೆ ಚಪ್ಪಲಿ ಎಸೆದಿದ್ದಾರೆ. ಹಿಂದೂಗಳ ಮೇಲೆ ಲಾಠಿಚಾರ್ಜ್, ಕಲ್ಲೆಸೆತ ಆಗಿದೆ. ಹಿಂದೂಗಳ ಹತ್ತಾರು ಅಂಗಡಿ ಸುಟ್ಟಿದ್ದಾರೆ. ಆದರೆ, ಹಿಂದೂಗಳ ಮೇಲೇ ಪ್ರಮುಖ ಆರೋಪಿಗಳನ್ನಾಗಿ ಮಾಡಿ (ಎ1, ಎ2, ಎ3 ಹೀಗೆ) ಕೇಸು ಹಾಕಿದ್ದಾರೆ ಎಂದು ಆಕ್ಷೇಪಿಸಿದರು.

ಅಂಗಡಿ ಸುಟ್ಟವರು, ಚಪ್ಪಲಿ, ಕಲ್ಲು ಎಸೆದವರನ್ನು ಕೇಸಿನಲ್ಲಿ ಸೇರಿಸಿಲ್ಲ. ಇದು ರಾಜ್ಯದ ಪ್ರಜಾಪ್ರಭುತ್ವವೇ? ಹಿಂದೂಗಳಿಗೆ ಒಂದು ರೀತಿ, ಮುಸಲ್ಮಾನರಿಗೆ ಇನ್ನೊಂದು ನೀತಿ- ಇದು ಸಂವಿಧಾನ, ಪ್ರಜಾಪ್ರಭುತ್ವಕ್ಕೆ ಮಾಡುವ ಅಪಮಾನ ಎಂದು ಟೀಕಿಸಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read