ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವ ನವರಾತ್ರಿ ಆಚರಣೆ ವೇಳಾಪಟ್ಟಿ ಬಿಡುಗಡೆ

ಮೈಸೂರು: ವಿಶ್ವವಿಖ್ಯಾತ ನಾಡಹಬ್ಬ ಮೈಸೂರು ದಸರಾ ಮಹೋತ್ಸವದ ನವರಾತ್ರಿ ಆಚರಣೆಯ ವೇಳಾಪಟ್ಟಿ ಬಿಡುಗಡೆ ಮಾಡಲಾಗಿದೆ.

ಅಕ್ಟೋಬರ್ 15ರಂದು ಭಾನುವಾರ ಶರನ್ನವರಾತ್ರಿ ಉತ್ಸವ ಆರಂಭವಾಗಲಿದೆ. ಚಾಮುಂಡಿ ಬೆಟ್ಟದಲ್ಲಿ ನಾಡ ದೇವತೆ ಚಾಮುಂಡೇಶ್ವರಿಗೆ ಪೂಜೆ ಸಲ್ಲಿಸುವ ಮೂಲಕ ಬೆಳಗಿನ 10:15 ರಿಂದ 10:36ರ ಶುಭ ವೃಶ್ಚಿಕ ಲಗ್ನದಲ್ಲಿ ಚಾಲನೆ ನೀಡಲಾಗುವುದು. ಸಂಗೀತ ನಿರ್ದೇಶಕ ಹಂಸಲೇಖ ದಸರಾ ಉದ್ಘಾಟಿಸಲಿದ್ದಾರೆ.

ನಾಡಹಬ್ಬ ಮೈಸೂರು ದಸರಾ ಹಬ್ಬದ ಅರಮನೆ ಪೂಜೆಗಳು ಆಗಸ್ಟ್ 15ರ ಸಂಜೆ 6.30ರಿಂದ ಶುಭ ಮೇಷ ಲಗ್ನದಲ್ಲಿ ಪೂಜೆ ಆರಂಭಿಸಲಾಗುವುದು.

ಅಕ್ಟೋಬರ್ 20ರಂದು ಶುಕ್ರವಾರ ಕಾತ್ಯಾಯನಿ -ಸರಸ್ವತಿ ಪೂಜೆ ನಡೆಯಲಿದೆ.

ಅಕ್ಟೋಬರ್ 21ರಂದು ಶನಿವಾರ ಕಾಳರಾತ್ರಿ -ಮಹಿಶಾಸುರ ಸಂಹಾರ

ಅಕ್ಟೋಬರ್ 23 ರಂದು ಸೋಮವಾರ ಆಯುಧ ಪೂಜೆ

ಅಕ್ಟೋಬರ್ 24ರಂದು ಮಂಗಳವಾರ ವಿಜಯದಶಮಿ ನಡೆಯಲಿದೆ. ಅ. 24ರಂದು ಮಕರ ಲಗ್ನದಲ್ಲಿ ಮುಖ್ಯಮಂತ್ರಿ ಸಿದ್ಧರಾಮಯ್ಯ ನಂದಿ ಧ್ವಜಕ್ಕೆ ಪೂಜೆ ಸಲ್ಲಿಸುವರು. ಅಂದು ಮಧ್ಯಾಹ್ನ 1:46 ರಿಂದ ಮಕರ ಲಗ್ನದಲ್ಲಿ ಪೂಜೆ ಸಲ್ಲಿಸಲಿದ್ದಾರೆ. ಗಣ್ಯಾತಿಗಣ್ಯರು ಸಂಜೆ 4:40 ರಿಂದ 5 ಗಂಟೆಯೊಳಗೆ ಶುಭ ಮೀನ ಲಗ್ನದಲ್ಲಿ ಪುಷ್ಪಾರ್ಚನೆ ನೆರವೇರಿಸುವರು. ಬಳಿಕ ನಾಡ ಹಬ್ಬ ಮೈಸೂರು ದಸರಾ ಐತಿಹಾಸಿಕ ಜಂಬೂ ಸವಾರಿ ಮೆರವಣಿಗೆ ಆರಂಭವಾಗಲಿದೆ.

ಅಕ್ಟೋಬರ್ 26ರಂದು ಭಾನುವಾರ ಬೆಟ್ಟದ ಚಾಮುಂಡೇಶ್ವರಿ ರಥೋತ್ಸವ ನಡೆಯಲಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read