ಮೈಸೂರು ದಸರಾ: ಎಲ್ಲಾ ಆನೆಗಳು, ಮಾವುತರು, ಕಾವಾಡಿಗಳು, ಸಿಬ್ಬಂದಿಗೆ ವಿಮೆ

ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವದಲ್ಲಿ ಭಾಗವಹಿಸುವ ಎಲ್ಲಾ 14 ಆನೆಗಳು, ಮಾವುತರು, ಕಾವಾಡಿಗಳು, ಉಸ್ತುವಾರಿ ಸಿಬ್ಬಂದಿಗೆ ಅರಣ್ಯ ಇಲಾಖೆಯಿಂದ ವಿಮೆ ಸೌಲಭ್ಯ ಕಲ್ಪಿಸಲಾಗಿದೆ.

ಸೆಪ್ಟೆಂಬರ್ 1ರಿಂದ ಅಕ್ಟೋಬರ್ ಅಂತ್ಯದವರೆಗೆ ವಿಮೆ ಅವಧಿ ಜಾರಿಯಲ್ಲಿರುತ್ತದೆ. ಗಂಡಾನೆಗಳಿಗೆ ತಲಾ 5 ಲಕ್ಷ ರೂ., ಹೆಣ್ಣಾನೆಗಳಿಗೆ ತಲಾ 4.50 ಲಕ್ಷ ರೂಪಾಯಿ ವಿಮೆ ಮಾಡಿಸಲಾಗಿದೆ.

ಆನೆ ನೋಡಿಕೊಳ್ಳುವ ಮಾವುತರು, ಕಾವಾಡಿಗಳು, ವಿಶೇಷ ಮಾವುತರು, ಆನೆಗಳಿಗೆ ಆಹಾರ ಸಿದ್ಧಪಡಿಸುವ ಸಿಬ್ಬಂದಿ, ಅರಣ್ಯ ಸಿಬ್ಬಂದಿ, ಉಸ್ತುವಾರಿ ಸಿಬ್ಬಂದಿಗೆ ತಲಾ 2 ಲಕ್ಷ ಮೊತ್ತ ವಿಮೆ ಮಾಡಿಸಲಾಗಿದೆ. ಆನೆಗಳಿಂದ ಆಸ್ತಿಪಾಸ್ತಿ, ಹಾನಿ ಉಂಟಾದರೆ ಅದಕ್ಕೆ ಪರಿಹಾರ ನೀಡುವುದಕ್ಕಾಗಿ 50 ಲಕ್ಷ ರೂ. ಮೊತ್ತದ ವಿಮೆ ಮಾಡಿಸಲಾಗಿದೆ. ಈ ಬಾರಿ ಒಟ್ಟಾರೆ 2.02 ಕೋಟಿ ರೂ. ವಿಮೆ ಮಾಡಿಸಲಾಗಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read