ಆಗಸದಲ್ಲಿ ಮೂಡಿದ ಗುಲಾಬಿ ಬಣ್ಣ; ಅಚ್ಚರಿ ವಿದ್ಯಾಮಾನದ ಹಿಂದಿದೆ ಈ ಸತ್ಯ….!

ಯುಕೆಯ ಕೆಂಟ್ ನಲ್ಲಿರುವ ನಿವಾಸಿಗಳಿಗೆ ಕಳೆದ ವಾರ ಅಚ್ಚರಿ ಕಾದಿತ್ತು. ಆಗಸದತ್ತ ನೋಡಿದ ಜನ ಗುಲಾಬಿ ಬಣ್ಣದ ರಂಗು ಕಂಡು ಬೆರಗಾಗಿದ್ರು. ಆಗಸದ ತುಂಬೆಲ್ಲಾ ಗುಲಾಬಿ ಬಣ್ಣ ಕಂಡು ಇದೆಂಥಾ ಅಚ್ಚರಿ ಎಂದು ಉದ್ಗರಿಸಿದ್ದರು.

ಇದು ವಿಶ್ವದ ಅಂತ್ಯ ಎಂದು ಹಲವರು ಹೇಳಿದರು. ಗೊಂದಲಕ್ಕೊಳಗಾದ ಜನ ವಿಚಿತ್ರವಾದ ಬೆಳಕಿಗೆ ಏನು ಕಾರಣವಿರಬಹುದೆಂದು ಊಹೆ ಮಾಡಲಾರಂಭಿಸಿದ್ದರು. ಕಟ್ಟಡಗಳಲ್ಲಿ ಯಾರೋ ಬೃಹತ್ ಯುವಿ ರೇಸ್ ಹೊಂದಿರುವಂತೆ ಇಡೀ ದೃಶ್ಯ ತೋರುತ್ತಿತ್ತು.‌

ಆದಾಗ್ಯೂ ಪಿಂಕ್ ಬಣ್ಣದ ಬೆಳಕಿನ ವಾಸ್ತವತೆಯನ್ನ ನಂತರ ತಿಳಿಯಲಾಯಿತು. ಬಿರ್ಚಿಂಗ್ಟನ್‌ನಲ್ಲಿರುವ ದೊಡ್ಡ ಕೈಗಾರಿಕಾ ಕಾರ್ಖಾನೆ ಥಾನೆಟ್ ಅರ್ಥ್ ಪ್ರಕಾರ ಇದೊಂದು ಕೃತಕ ಬೆಳಕಾಗಿದೆ. ಇಲ್ಲಿ 400 ಮಿಲಿಯನ್ ಟೊಮೆಟೊಗಳನ್ನು ಬೆಳೆಯಲು ಕೃತಕ ಗುಲಾಬಿ ಬೆಳಕನ್ನು ಬಿಡಲಾಗುತ್ತದೆ.

ಅವರ ವೆಬ್‌ಸೈಟ್ ಪ್ರಕಾರ “ಬ್ರಿಟನ್‌ನ ಪ್ರಮುಖ ಗಾಜಿನಮನೆ ಸಂಕೀರ್ಣವು ಪೂರ್ವ ಕೆಂಟ್‌ನ ಭೂ ಪ್ರದೇಶದಲ್ಲಿರುವುದು ಹೆಮ್ಮೆ. ಈ ಗಾಜಿನ ಮನೆಗಳು ಪ್ರತಿ ವರ್ಷ ಸುಮಾರು 400 ಮಿಲಿಯನ್ ಟೊಮೆಟೊಗಳು, 30 ಮಿಲಿಯನ್ ಸೌತೆಕಾಯಿಗಳು ಮತ್ತು 24 ಮಿಲಿಯನ್ ಮೆಣಸುಗಳನ್ನು ಉತ್ಪಾದಿಸುತ್ತವೆ” ಎಂದು ತಿಳಿಸಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read