ಆಸ್ಟ್ರೇಲಿಯಾ ಸಮುದ್ರ ತೀರದಲ್ಲಿ ನಿಗೂಢ ವಸ್ತು ಪತ್ತೆ; ಈ ಕುರಿತು ಹರಿದಾಡ್ತಿದೆ ಊಹಾಪೋಹ

ಪಶ್ಚಿಮ ಆಸ್ಟ್ರೇಲಿಯಾದ ಗ್ರೀನ್ ಹೆಡ್ ಬಳಿಯ ಆಸ್ಟ್ರೇಲಿಯಾದ ಕಡಲತೀರದಲ್ಲಿ ನಿಗೂಢ ವಸ್ತುವೊಂದು ಪತ್ತೆಯಾಗಿದ್ದು, ಸ್ಥಳೀಯರು ಮತ್ತು ಅಧಿಕಾರಿಗಳು ಗೊಂದಲಕ್ಕೊಳಗಾಗಿದ್ದಾರೆ.ಈ ವಿಚಾರವಾಗಿ ಸೋಶಿಯಲ್​ ಮೀಡಿಯಾದಲ್ಲಿ ಸಾಕಷ್ಟು ಊಹಾಪೋಹಗಳು ಹುಟ್ಟಿಕೊಂಡಿವೆ. ಇದು 2014ರಲ್ಲಿ ಕಣ್ಮರೆಯಾಗಿದ್ದ MH370 ವಿಮಾನಕ್ಕೆ ಸಂಬಂಧಿಸಿರಬಹುದು ಎಂದು ಕೆಲವರು ಊಹಿಸಿದ್ದಾರೆ.

ಆದರೆ ಈ ಊಹಾಪೋಹಗಳನ್ನು ವಾಯುಯಾನ ತಜ್ಞ ಜೆಫ್ರಿ ಥಾಮಸ್​ ತಳ್ಳಿ ಹಾಕಿದ್ದಾರೆ. ಈ ವಸ್ತುವು ಕಳೆದ ವರ್ಷ ಉಡಾವಣೆಯಾದ ರಾಕೆಟ್​ನ ಒಂದು ಭಾಗವಾಗಿದೆ, MH370 ಅಥವಾ ಬೋಯಿಂಗ್ 777 ವಿಮಾನಕ್ಕೂ ಈ ಅವಶೇಷಗಳಿಗೆ ಯಾವುದೇ ಸಂಬಂಧವಿಲ್ಲ ಎಂದು ಹೇಳಿದ್ದಾರೆ.

“ಕಳೆದ 12 ತಿಂಗಳುಗಳಲ್ಲಿ ಉಡಾವಣೆಯಾದ ರಾಕೆಟ್‌ನಿಂದ ಇದು ಸಂಭವನೀಯ ಇಂಧನ ಟ್ಯಾಂಕ್‌ನಂತೆ ಕಾಣುತ್ತದೆ, ಅದು ಹಿಂದೂ ಮಹಾಸಾಗರಕ್ಕೆ, ಹಿಂದೂ ಮಹಾಸಾಗರದಲ್ಲಿ ಎಲ್ಲೋ ಜಲಸಮಾಧಿಯಾಗಿದೆ ಮತ್ತು ಗ್ರೀನ್ ಹೆಡ್‌ನಲ್ಲಿ ಕೊಚ್ಚಿಕೊಂಡು ಹೋಗಿದೆ” ಎಂದು ವಾಯುಯಾನ ತಜ್ಞ ಹಾಗೂ ಸಂಪಾದಕ ಜೆಫ್ರಿ ಥಾಮಸ್​ ಹೇಳಿದ್ದಾರೆ.

“ಇದು MH370 ನ ಭಾಗವಾಗಿರಲು ಸಾಧ್ಯವೇ ಇಲ್ಲ. ಇದು ಬೋಯಿಂಗ್ 777 ನ ಭಾಗವಲ್ಲ ಮತ್ತು ವಾಸ್ತವವಾಗಿ MH370 ಒಂಬತ್ತೂವರೆ ವರ್ಷಗಳ ಹಿಂದೆ ಕಳೆದುಹೋಗಿದೆ, ಇದು ಒಂದು ವೇಳೆ MH370ನ ಭಾಗವಾಗಿದ್ದರೆ ಇನ್ನೂ ಹೆಚ್ಚಿನ ಸವೆತವನ್ನು ಹೊಂದಿರಬೇಕಿತ್ತು ಎಂದು ಹೇಳಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read