ತುಮಕೂರು : ತುಮಕೂರಿನಲ್ಲಿ 19 ನವಿಲುಗಳ ನಿಗೂಢ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ವನ್ಯಜೀವಿಗಳ ಅಪರಾಧದಡಿ ಕೇಸ್ ದಾಖಲಾಗಿದೆ.
19 ನವಿಲುಗಳು ನಿಗೂಢ ಸಾವನ್ನಪ್ಪಿರುವ ಘಟನೆ ತುಮಕೂರು ಜಿಲ್ಲೆಯ ಮಧುಗಿರಿ ತಾಲೂಕಿನ ಮಿಡಿಗೇಶಿಯ ಹನುಮಂತಪುರದಲ್ಲಿ ನಡೆದಿತ್ತು. . ನವಿಲುಗಳ ಸಾವಿಗೆ ನಿಖರ ಕಾರಣ ತಿಳಿದು ಬಂದಿರಲಿಲ್ಲ. ಇದೀಗ ನಿಗೂಢ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ವನ್ಯಜೀವಿಗಳ ಅಪರಾಧದಡಿ ಕೇಸ್ ದಾಖಲಾಗಿದ್ದು, ತನಿಖೆ ನಡೆಸಲಾಗುತ್ತಿದೆ.
14 ಹೆಣ್ಣು ನವಿಲುಗಳು ಸೇರಿ 19 ನವಿಲುಗಳ ಮೃತದೇಹ ಪತ್ತೆ ಆಗಿದೆ. ಬೆಳಗ್ಗೆ ರೈತರು ಜಮೀನಿಗೆ ಹೋಗಿದ್ದಾಗ ನವಿಲಿನ ಮೃತದೇಹ ಪತ್ತೆಯಾಗಿದೆ. ಕ್ರಿಮಿನಾಶಕ ಸಿಂಪಡಿಸಿರುವ ಬೆಳೆಗಳನ್ನು ಸೇವಿಸಿ ನವಿಲು ಮೃತಪಟ್ಟಿರುವ ಶಂಕೆ ವ್ಯಕ್ತವಾಗಿತ್ತು.
TAGGED:ವನ್ಯಜೀವಿ