ಮೈಸೂರು: ದೇವಸ್ಥಾನದ ಬಳಿ ಕಾರು ನಿಲ್ಲಿಸಬೇಡ ಎಂದಿದ್ದಕ್ಕೆ ಕಾನ್ಸ್ ಟೇಬಲ್ ಮೇಲೆ ಯುವಕನೊಬ್ಬ ಹಲ್ಲೆ ನಡೆಸಿರುವ ಆರೋಪ ಕೇಳಿಬಂದಿದೆ.
ಮೈಸೂರಿನ ಕೋಟೆ ಆಂಜನೇಯ ಸ್ವಾಮಿ ದೇವಸ್ಥಾನದ ಬಳಿ ಈ ಘಟನೆ ನಡೆದಿದೆ. ಕಾನ್ಸ್ ಟೇಬಲ್ ಪುಟ್ಟರಾಜು ಎಂಬುವವರ ಮೇಲೆ ಪ್ರೀತಂ ಎಂಬಾತ ಹಲ್ಲೆ ನಡೆಸಿದ್ದಾನೆ. ಈ ಬಗ್ಗೆ ಮೈಸೂರಿನ ದೇವರಾಜ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನಿನ್ನೆ ರಾತ್ರಿ ದೇವಸ್ಥಾನದ ಬಳಿ ಯುವಕ ಪ್ರೀತಂ ಕಾರು ನಿಲ್ಲಿಸಿದ್ದ. ತಡರಾತ್ರಿಯಾದರೂ ಕಾರು ತೆಗೆದಿರಲಿಲ್ಲ. ತಕ್ಷಣ ಕಾರು ತೆಗೆಯುವಂತೆ ಪಿಸಿ ಪುಟ್ಟರಾಜು ಪ್ರೀತಂ ಗೆ ಹೇಳಿದ್ದರು. ಈ ವೇಳೆ ಇಬ್ಬರ ನಡುವೆ ವಾಗ್ವಾದ ನಡೆದು ಪ್ರೀತಂ ಪಿಸಿ ಪುಟ್ಟರಾಜು ಮೇಲೆ ಹಲ್ಲೆ ನಡೆಸಿದ್ದಾನೆ ಎನ್ನಲಾಗಿದೆ. ದೇವರಾಜ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಯುವಕ ಪ್ರೀತಂ ಹಾಗೂ ಕಾರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.