ಮೈಸೂರು-ದರ್ಭಾಂಗ್ ರೈಲು ಭೀಕರ ಅಪಘಾತ: ಬೆಂಗಳೂರಿನಿಂದ ಹೊರಡುವ ಎರಡು ರೈಲುಗಳ ಮಾರ್ಗದಲ್ಲಿ ಬದಲಾವಣೆ

ಚೆನ್ನೈ: ತಮಿಳುನಾಡಿನ ಕವರಪಟ್ಟೈ ರೈಲು ನಿಲ್ದಾಣದ ಬಳಿ ಮೈಸೂರು-ದರ್ಭಾಂಗ್ ಬಾಗಮತಿ ಎಕ್ಸ್ ಪ್ರೆಸ್ ರೈಲು ಅಪಘಾತಕ್ಕೀಡಾಗಿದೆ. ಈ ಹಿನ್ನೆಲೆಯಲ್ಲಿ ಬೆಂಗಳೂರಿನಿಂದ ಹೊರಡುವ ಎರಡು ರೈಲುಗಳ ಮಾರ್ಗ ಬದಲಾವಣೆ ಮಾಡಲಾಗಿದೆ.

ಇಂದು ಬೆಳಗ್ಗೆ 8.50ಕ್ಕೆ ಹೊರಡುವ ಎಸ್​ಎಂವಿಟಿ ಬೆಂಗಳೂರು-ಕಾಮಾಕ್ಯ (ರೈಲು ಸಂಖ್ಯೆ: 12551) ಎಸಿ ಎಕ್ಸಪ್ರೆಸ್​ ರೈಲು ಧರ್ಮಾವರಂ, ವಿಜಯವಾಡ ಮಾರ್ಗವಾಗಿ ಸಂಚರಿಸಲಿದೆ. ಇದರಿಂದಾಗಿ ಜೋಳರಪೆಟ್ಟೈ, ಕಟ್ಟಾಡಿ, ಪೆರಂಬೂರು ಹಾಗೂ ಗೂಡೂರು ನಿಲ್ದಾಣಗಳು ಬಿಟ್ಟು ಹೋಗಲಿವೆ.

ಬೆಳಗ್ಗೆ 9.15ಕ್ಕೆ ಹೊರಡುವ ಎಸ್​​ಎಂವಿಟಿ ಬೆಂಗಳೂರು-ದಾನಪುರ ಸಂಗಮಿತ್ರ ಎಕ್ಸ್‌ಪ್ರೆಸ್ (ರೈಲು ಸಂಖ್ಯೆ: 12295) ರೈಲು, ಧರ್ಮಾವರಂ, ಕಾಜೀಪೇಟ್​ ಮಾರ್ಗವಾಗಿ ಹೋಗಲಿದೆ. ಕೆಆರ್​ಪುರ, ಬಂಗಾರಪೇಟೆ, ಕುಪ್ಪಂ, ಜೋಳರವಟ್ಟೈ, ಕಟ್ಟಾಡಿ, ಆರಕೋಣಂ, ಪೆರಂಬೂರ್​, ಗೂಡೂರ್​, ನೆಲ್ಲೂರು, ಒಂಗೋಲ್​, ವಿಜಯವಾಡ ಹಾಗೂ ವಾರಂಗಲ್​ ನಿಲ್ದಾಣಗಳು ತಪ್ಪಲಿವೆ.

ಶುಕ್ರವಾರ ಮೈಸೂರಿನಿಂದ ಹೊರಟಿದ್ದ ಎಕ್ಸ್‌ಪ್ರೆಸ್‌ ರೈಲು ಬೆಂಗಳೂರಿನ ಕೆಎಸ್​ಆರ್​ ರೈಲು ನಿಲ್ದಾಣ ದಾಟಿ ಹೋಗ್ತಿತ್ತು. ರಾತ್ರಿ 8 ಗಂಟೆ ಸುಮಾರಿಗೆ ಪೆರಂಬೂರು ದಾಟಿದ್ದ ರೈಲು, ದರ್ಬಾಂಗದತ್ತ ಪ್ರಯಾಣ ಬೆಳೆಸಿತ್ತು. ಆದ್ರೆ, 75 ಕಿಲೋಮೀಟರ್‌ ವೇಗದಲ್ಲಿ ಸಂಚರಿಸುತ್ತಿದ್ದ ಎಕ್ಸ್‌ಪ್ರೆಸ್‌ ರೈಲು, ಕಾವರಪೇಟ್ಟೈ ತಲುಪುತ್ತಿದ್ದಂತೆ ಲೂಪ್‌ ಲೇನ್‌ನಲ್ಲಿದ್ದ ಗೂಡ್ಸ್‌ ರೈಲಿಗೆ ಡಿಕ್ಕಿ ಹೊಡೆದಿದೆ. ಗೂಡ್ಸ್‌ ರೈಲು ನಿಂತಿದ್ದ ಲೂಪ್‌ ಲೇನ್‌ ಟ್ರ್ಯಾಕ್‌ಗೆ ರೈಲು ನುಗ್ಗಿದ್ದು, 75 ಕಿಮೀ ವೇಗದಲ್ಲಿ ಗೂಡ್ಸ್‌ ರೈಲಿಗೆ ಡಿಕ್ಕಿ ಹೊಡೆದಿತ್ತು. ಡಿಕ್ಕಿಯಾದ ರಭಸಕ್ಕೆ ರೈಲಿನ ಬೋಗಿಯಲ್ಲಿ ಬೆಂಕಿ ಹೊತ್ತಿಕೊಂಡಿತ್ತು. 12ರಿಂದ 13 ಬೋಗಿಗಳು ಹಳಿ ತಪ್ಪಿ ಬಿದ್ದಿವೆ.

 

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read