BIG NEWS: ವಿಮಾನ ಪ್ರಯಾಣಿಕರಿಗೆ ಬಿಗ್ ಶಾಕ್: ಮೈಸೂರಿನಿಂದ ಪ್ರಮುಖ ನಗರಗಳಿಗೆ ಸಂಚರಿಸುತ್ತಿದ್ದ ವಿಮಾನಯಾನಗಳು ದಿಢೀರ್ ಸ್ಥಗಿತ

ಮೈಸೂರು: ವಿಮಾನ ಪ್ರಯಾಣಿಕರಿಗೆ ಕಹಿ ಸುದ್ದಿ. ಮೈಸೂರಿನ ಮಂಡಕಳ್ಳಿ ವಿಮಾನ ನಿಲ್ದಾಣದಿಂದ ಪ್ರಮುಖ ನಗರಗಳಿಗೆ ಹಾರಾಟ ನಡೆಸುತ್ತಿದ್ದ ವಿಮಾನಗಳನ್ನು ಸ್ಥಗಿತಗೊಳಿಸಲಾಗಿದೆ.

ಏರ್ ಲೈನ್ಸ್ ಈ ನಿರ್ಧಾರದಿಂದ ಆಗಾಗ ವಿಮಾನ ಸಂಚಾರ ನಡೆಸುತ್ತಿದ್ದ ಪ್ರಯಾಣಿಕರಿಗೆ, ಉದ್ಯಮಿಗಳಿಗೆ ಸಮಸ್ಯೆಯಾಗಿದೆ. ಮೈಸೂರಿನಿಂದ ಚೆನ್ನೈ, ಮೈಸೂರಿನಿಂದ ಹೈದರಾಬಾದ್ ಹೊರತುಪಡಿಸಿ ಬೇರಾವ ವಿಮಾನಗಳ ಹಾರಾಟ ಇಲ್ಲ.

ಮೈಸೂರು-ಹೈದರಾಬಾದ್, ಚೆನ್ನೈ-ಹೈದರಾಬಾದ್, ಮೈಸೂರು-ಚೆನ್ನೈ ಮಾರ್ಗದಲ್ಲಿ ಇಂಡಿಗೋ ವಿಮಾನಗಳು ಮಾತ್ರ ಕಾರ್ಯನಿರ್ವಹಿಸುತ್ತಿವೆ. ಇತರ ಮಾರ್ಗಗಳ ಏರ್ ಲೈನ್ಸ್ ಗಳ ಕಾರ್ಯಾಚರಣೆ ಸ್ಥಗಿತಗೊಳಿಸಲಾಗಿದೆ ಎಂದು ಮೈಸೂರು ವಿಮಾನ ನಿಲ್ದಾಣ ನಿರ್ದೇಶಕ ಜಿ.ಆರ್.ಅನೂಪ್ ತಿಳಿಸಿದ್ದಾರೆ ಎಂದು ವರದಿಯಾಗಿದೆ.

ಮೈಸೂರಿನಿಂದ ಕೊಚ್ಚಿ, ಗೋವಾ, ಬೆಳಗಾವಿ, ಹುಬ್ಬಳ್ಳಿ ಹಾಗೂ ಕಲಬುರ್ಗಿಗೆ ತೆರಳುತ್ತಿದ್ದ ವಿಮಾನಗಳ ಕಾರ್ಯಾಚರಣೆ ಸ್ಥಗಿತಗೊಂಡಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read