ಮೈಸೂರು: ಶಾಲೆಗೆ ತೆರಳು ವಿದ್ಯಾರ್ಥಿಗಳು ಬಸ್ ಗಾಗಿ ಎಷ್ಟು ಹೊತ್ತು ಕಾದರೂ ಬಸ್ ಬಾರದಿದ್ದಾಗ ಹಾಲಿನ ವಾಹನ ಹತ್ತಿ ತೆರಳಿದ್ದು, ದುರದೃಷ್ಟವಶಾತ್ ಹಾಲಿನ ವಾಹನ ಪಲ್ಟಿಯಾಗಿ ಬಿದ್ದಿರುವ ಘಟನೆ ಮೈಸೂರು ಜಿಲ್ಲ್ರೆಯ ಹುಣಸೂರು ತಾಲೂಕಿನ ಸೋಮನಹಳ್ಳಿಯಲ್ಲಿ ನಡೆದಿದೆ.
ಹುಣಸೂರಿನ ಬನ್ನುಕುಪ್ಪೆ ಪ್ರೌಢಶಾಲೆಗೆ ತೆರಳು ವಿದ್ಯಾರ್ಥಿಗಳು ಬಸ್ ಬಂದಿಲ್ಲ ಎಂದು ಹಾಲಿನ ವಾಹನ ಹತ್ತಿ ಸಾಗಿದ್ದಾರೆ. ಆದರೆ ವಾಹನ ಪಲ್ಟಿಯಾಗಿ ಬಿದ್ದ ಪರಿಣಾಮ 7 ಜನರು ಗಾಯಗೊಂಡಿದ್ದಾರೆ.
ಗಾಯಾಳು ವಿದ್ಯಾರ್ಥಿಗಳನ್ನು ಪಾಲಾಕ್ಷ, ವಿದ್ಯಾಚರಣ, ಅಪ್ಪು, ನಿತಿನ್, ಚಂದ್ರಶೇಖರ್, ಮನುಕುಮಾರ್, ಸಂಜಯ್ ಎಂದು ಗುರುತುಸಲಾಗಿದೆ. ಗಾಯಾಳು ವಿದ್ಯಾರ್ಥಿಗಳನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದೆ. ಪಾಲಾಕ್ಷಾ ಎಂಬ ವಿದ್ಯಾರ್ಥಿ ಗಂಭೀರವಾಗಿ ಗಾಯಗೊಂಡಿದ್ದು, ತೀವ್ರನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಹುಣಸೂರು ಗ್ರಾಮಾಂತರ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.