ಮೈಸೂರು: ವರುಣಾರ್ಭಟದ ನಡುವೆಯೇ ರಾಜ್ಯದಲ್ಲಿ ಅಪಘಾತ ಪ್ರಕರಣಗಳು ಹೆಚ್ಚುತ್ತಿವೆ. ಹಿಂಬದಿಯಿಂದ ಸದ್ದಿಲ್ಲದಂತೆ ಬಂದ ಬಸ್ ಬೈಕ್ ಸವಾರನಿಗೆ ಡಿಕ್ಕಿ ಹೊಡೆದು ಆತನ ತಲೆಯ ಮೇಲೆಯೇ ಹರಿದು ಹೋಗಿರುವ ಘಟನೆ ಮೈಸೂರಿನಲ್ಲಿ ನಡೆದಿದೆ.
ಮೈಸೂರಿನ ವಿವೇಕಾನಂದ ನಗರದಲ್ಲಿ ಈ ದುರಂತ ಸಂಭವಿಸಿದೆ. ಬೈಕ್ ಸವಾರನ ಹಿಂದಿನಿಂದ ಬಂದ ಬಸ್ ಬೈಕ್ ಗೆ ಡಿಕ್ಕಿ ಹೊಡೆದಿದ್ದು, ಕೆಳಗೆ ಬಿದ್ದ ಬೈಕ್ ಸವಾರನ ತಲೆ ಮೇಲೆ ಬಸ್ ಚಕ್ರ ಹತ್ತಿ ಹೋಗಿದೆ. ಸವಾರ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಪುರುಷೊತ್ತಮಯ್ಯ ಮೃತ ದುರ್ದೈವಿ. ಘಟನಾ ಸ್ಥಳಕ್ಕೆ ಪೊಲೀಸರು ದೌಡಾಯಿಸಿ ಪರಿಶೀಲನೆ ನಡೆಸಿದ್ದಾರೆ.