ಅಪರೂಪದ ಪ್ರಸಂಗ: ತನಗೆ ಬಂದ ಪ್ರಶಸ್ತಿಯನ್ನು ಸಹೋದ್ಯೋಗಿಗೆ ನೀಡಿದ ಅಧಿಕಾರಿ…!

ಮೈಸೂರು: ಸರ್ಕಾರದ ಹಿರಿಯ ಅಧಿಕಾರಿಯೊಬ್ಬರು ತನಗೆ ಬಂದ ಪ್ರಶಸ್ತಿಯನ್ನು ತನ್ನ ಸಹೋದ್ಯೋಗಿಗೆ ನೀಡಿ ಪ್ರಶಸ್ತಿಯ ಮೌಲ್ಯವನ್ನೇ ಹೆಚ್ಚಿಸಿರುವ ಅಪರೂಪದ ಪ್ರಸಂಗ ಮೈಸೂರಿನಲ್ಲಿ ನಡೆದಿದೆ.

ಮೈಸೂರು ಜಿಲ್ಲಾ ನಗರ ಕೇಂದ್ರ ಗ್ರಂಥಾಲಯದ ಉಪನಿರ್ದೇಶಕರಾದ ಬಿ.ಮಂಜುನಾಥ್ ಅವರು ತಮಗೆ ಬಂದ ಪ್ರಶಸ್ತಿಯನ್ನು ಸಹೋದ್ಯೋಗಿಗೆ ನೀಡಿ ಅವರ ಸೇವಾ ಕಾರ್ಯವನ್ನು ಗೌರವಿಸಿದ್ದಾರೆ.

ಬಿ.ಮಂಜುನಾಥ್ ಅವರಿಗೆ 2023ನೇ ಸಾಲಿನ ಅತ್ಯುತ್ತಮ ಡಿಜಿಟಲ್ ಓದುಗರ ನೋಂದಣಿ ಪ್ರಶಸ್ತಿ ಬಂದಿತ್ತು. ಆದರೆ ಆ ಪ್ರಶಸ್ತಿಯನ್ನು ತಮ್ಮ ಸಹೋದ್ಯೋಗಿ ಪರಮೇಶ್ ಎಂಬುವವರಿಗೆ ನೀಡುವಂತೆ ಮಂಜುನಾಥ್ ಸಾರ್ವಜನಿಕ ಗ್ರಂಥಾಲಯ ಇಲಾಖೆಗೆ ಪತ್ರ ಬರೆದು ಕೋರಿದ್ದಾರೆ. ಪರಮೇಶ್ ಹೆಚ್.ಡಿ.ಕೋಟೆ ಗ್ರಂಥಾಲಯ ಪ್ರಭಾರ ಅಧಿಕಾರಿಯಾಗಿದ್ದಾರೆ. ಪರಮೇಶ್, ಒಟ್ಟು 23 ಲಕ್ಷ ನೋಂದಣಿಯಲ್ಲಿ 12 ಲಕ್ಷ ನೋಂದಣಿ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಪ್ರಶಸ್ತಿ ಅವರಿಗೆ ವರ್ಗಾಯಿಸಲು ಹಿರಿಯ ಅಧಿಕಾರಿ ಮಂಜುನಾಥ್ ಮನವಿ ಮಾಡಿದ್ದರು.

2015ರಲ್ಲಿಯೂ ಬಿ.ಮಂಜುನಾಥ್ ಇದೇ ಪ್ರಶಸ್ತಿಗೆ ಭಾಜನರಾಗಿದ್ದರು ಎಂಬುದು ಗಮನಾರ್ಹ. ತನಗೆ ಬಂದ ಪ್ರಶಸ್ತಿಯನ್ನು ಸಹೋದ್ಯೋಗಿಗೆ ನೀಡಿ ಗೌರವಿಸಿದ ಅಧಿಕಾರಿಯ ನಡೆ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಗಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read