ನವದೆಹಲಿ: ಪ್ರಮುಖ ಇ-ಕಾಮರ್ಸ್ ಕಂಪನಿಗಳಲ್ಲಿ ಒಂದಾಗಿರುವ ಮಿಂತ್ರಾ (Myntra) ವಿರುದ್ಧ ಜಾರಿ ನಿರ್ದೇಶನಾಲಯ (ಇಡಿ) ಪ್ರಕರಣ ದಾಖಲಿಸಿದೆ.
ಮಿಂತ್ರಾ ಹಾಗೂ ಅದರ ಸಂಬಂಧಿತ ಕಂಪನಿಗಳು ಹಾಗೂ ನಿರ್ದೇಶಕರ ವಿರುದ್ಧ 1.654 ಕೋಟಿಗೂ ಹೆಚ್ಚು ವಂಚನೆ ಪ್ರಕರಣ ಸಂಬಂಧ ವಿದೇಶಿ ವಿನಿಮಯ ನಿರ್ವಹಣಾ ಕಾಯ್ದೆ ಉಲ್ಲಂಘನೆ ಹಿನ್ನೆಲೆಯಲ್ಲಿ ಇಡಿ ಕೇಸ್ ದಾಖಲಿಸಿದೆ.
ಮಿಂತ್ರಾ ಎಂಬ ಬ್ರ್ಯಾಂಡ್ ಹೆಸರಿನ ಮಿಂತ್ರಾ ಡಿಸೈನರ್ಸ್ ಪ್ರೈವೆಟ್ ಲಿಮಿಟೆಡ್ ಮತ್ತು ಸಂಬಂಧಿತ ಕಂಪನಿಗಳು ಸಗಟು ದರ ಮತ್ತು ಸಾಗಾಣೆ ಸೋಗಿನಲ್ಲಿ ಚಿಲ್ಲರೆ ವ್ಯಾಪಾರ ನಡೆಸುತ್ತಿವೆ ಎಂಬ ಬಗ್ಗೆ ಖಚಿತ ಮಾಹಿತಿ ಆಧರಿಸಿ ವಿದೇಶಿ ವಿನಿಮಯ ನಿರ್ವಹಣಾ ಕಾಯ್ದೆ ಸೆಕ್ಷನ್ 16(3)ರ ಅಡಿ ಪ್ರಕರಣ ದಾಖಲಾಗಿದೆ ಎಂದು ಇಡಿ ಅಧಿಕಾರಿಗಳು ತಿಳಿಸಿದ್ದಾರೆ.