ಪ್ರತಿ ಮಗುವಿನ ಮೂಲಭೂತ ಅವಶ್ಯಕತೆ, ಬೇಷರತ್ತಾದ ಪ್ರೀತಿ ಮತ್ತು ಕಾಳಜಿಗೆ ಇನ್ನೊಂದು ಹೆಸರೇ ತಾಯಿ. ತಾಯಿಯೊಂದಿಗೆ ಮಗುವಿನ ಬಂಧವು ಶಾಶ್ವತವಾಗಿದೆ ಮತ್ತು ಜನನಕ್ಕಿಂತಲೂ ಮುಂಚೆಯೇ ಪ್ರಾರಂಭವಾಗುತ್ತದೆ. ಭಾರತದ ಮಹಿಳಾ ರಾಷ್ಟ್ರೀಯ ಫುಟ್ಬಾಲ್ ತಂಡದ ಸ್ಟ್ರೈಕರ್ ಸಂಧಿಯಾ ರಂಗನಾಥನ್ ಅವರು ತಮ್ಮ ತಾಯಿಗಾಗಿ ಟ್ವಿಟ್ಟರ್‌ನಲ್ಲಿ ಹೃತ್ಪೂರ್ವಕ ಟಿಪ್ಪಣಿಯನ್ನು ಹಂಚಿಕೊಂಡಿದ್ದು ಇದೀಗ ವೈರಲ್ ಆಗಿದೆ.
ಸಂಧಿಯಾ ಅವರು ನನ್ನ ತಾಯಿಗೇ ನನ್ನ ನಾಯಕಿ, ನನಗೆ ಅವರೇ ಸ್ಫೂರ್ತಿ ಎಂದು ಬರೆದುಕೊಂಡಿದ್ದಾರೆ. ಒಂಟಿಯಾಗಿದ್ದರೂ ತಮ್ಮ ಇಬ್ಬರು ಹೆಣ್ಣುಮಕ್ಕಳು ಉತ್ತಮ ಜೀವನವನ್ನು ತಮ್ಮ ತಾಯಿ ಹೇಗೆ ನೀಡಿದ್ದಾರೆ ಎಂದು ಅವರು ಬರೆದುಕೊಂಡಿದ್ದಾರೆ.
“ಇಂದು ನಾನು ಈ ಸ್ಥಾನದಲ್ಲಿ ನಿಂತಿದ್ದರೆ ಅದಕ್ಕೆ ನನ್ನ ತಾಯಿ ಕಾರಣ. ಇಬ್ಬರು ಹೆಣ್ಣುಮಕ್ಕಳನ್ನು ಒಂಟಿಯಾಗಿ ಸಲಹುವುದು ಸಾಮಾನ್ಯ ಹೆಣ್ಣಿಗೆ ಸುಲಭದ ಮಾತಲ್ಲ. ಆದರೆ ನನ್ನ ತಾಯಿ ಮಕ್ಕಳಿಗಾಗಿ ಜೀವನ ಸವೆಸಿದ್ದಾರೆ. ನನ್ನನ್ನು ಈ ಮಟ್ಟಕ್ಕೆ ತಂದು ನಿಲ್ಲಿಸಿದ್ದಾರೆ. ನಮಗೆ ಆಕೆಯೇ ಆಧಾರ ಸ್ತಂಭ. ಇಂಥ ಅಮ್ಮನನ್ನು ಪಡೆದ ನಾನೇ ಧನ್ಯ ಎಂದಿದ್ದಾರೆ.
ಸಂಧಿಯಾ ತಮ್ಮ ತಾಯಿಯೊಂದಿಗೆ ಫುಟ್ಬಾಲ್ ಜರ್ಸಿಯನ್ನು ಧರಿಸಿರುವ ಫೋಟೋವನ್ನು ಹಂಚಿಕೊಂಡಿದ್ದು ಬರೆದಿರುವ ಈ ಬರಹ ನೋಡಿ ನೆಟ್ಟಿಗರು ಭಾವುಕರಾಗಿದ್ದಾರೆ.
https://twitter.com/SandhiyaR_7/status/1627564982304133120?ref_src=twsrc%5Etfw%7Ctwcamp%5Etweetembed%7Ctwterm%5E1627564982304133120%7Ctwgr%5E1d5a0173849dd3e19435b4f48c9eb508d32213e0%7Ctwcon%5Es1_&ref_url=https%3A%2F%2Fwww.ndtv.com%2Foffbeat%2Fmy-amma-my-hero-footballer-shares-heartfelt-note-for-mother-3800872