ಮುರುಘಾ ಶರಣರ ವಿರುದ್ಧ ಷಡ್ಯಂತ್ರ ರೂಪಿಸಿದ ಕೇಸ್ ವರ್ಗಾವಣೆಗೆ ರಿಟ್: ಸರ್ಕಾರದ ಪ್ರತಿಕ್ರಿಯೆ ಕೇಳಿದ ಹೈಕೋರ್ಟ್

ಚಿತ್ರದುರ್ಗ: ಮುರುಘಾ ಮಠದ ಮುರುಘಾ ಶರಣರ ವಿರುದ್ಧ ಷಡ್ಯಂತ್ರ ರೂಪಿಸಿದ ಆರೋಪ ಹಿನ್ನೆಲೆ ಮಠದ ಮಾಜಿ ಆಡಳಿತ ಅಧಿಕಾರಿ ಎಸ್.ಕೆ. ಬಸವರಾಜನ್ ವಿರುದ್ಧದ ಕೇಸ್ ಬೇರೆ ಠಾಣೆಗೆ ವರ್ಗಾವಣೆ ಕೋರಿ ರಿಟ್ ಸಲ್ಲಿಸಲಾಗಿದೆ.

ಬಸವಪ್ರಭು ಸ್ವಾಮೀಜಿ ಸಲ್ಲಿಸಿದ್ದ ರಿಟ್ ವಿಚಾರಣೆ ಹೈಕೋರ್ಟ್ ನಲ್ಲಿ ನಡೆದಿದೆ. ಎಸ್.ಕೆ. ಬಸವರಾಜನ್ ವಿರುದ್ಧ ವಂಚನೆ, ಬೆದರಿಕೆ, ಅಪ್ರಾಪ್ತೆಯರಿಗೆ ದೂರು ನೀಡಲು ಪ್ರಚೋದನೆ ಕೇಸ್ ದಾಖಲಾಗಿದೆ. ಪೊಲೀಸರು ಸಮರ್ಪಕ ತನಿಖೆ ನಡೆಸದೆ ಅಸಹಾಯಕರಾಗಿದ್ದಾರೆ. ಚಿತ್ರದುರ್ಗ ಗ್ರಾಮಾಂತರ ಠಾಣೆಯಿಂದ ತನಿಖೆ ವರ್ಗಾಯಿಸಲು ಮನವಿ ಮಾಡಲಾಗಿದೆ.

ಹಿರಿಯ ಮಹಿಳಾ ಪೊಲೀಸ್ ಅಧಿಕಾರಿಗಳಿಂದ ತನಿಖೆಗೆ ಕೋರಲಾಗಿದೆ. ಅರ್ಜಿ ಸಂಬಂಧ ರಾಜ್ಯ ಸರ್ಕಾರದ ಪ್ರತಿಕ್ರಿಯೆ ಕೇಳಿದ ಹೈಕೋರ್ಟ್ ಏಕಸದಸ್ಯ ಪೀಠ ವಿಚಾರಣೆಯನ್ನು ಫೆಬ್ರವರಿ 6 ಕ್ಕೆ ನಿಗದಿಪಡಿಸಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read