ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಚಿತ್ರದುರ್ಗದ ಮುರುಘಾ ಶರಣರು ಖುಲಾಸೆ ಹಿನ್ನೆಲೆ ವಿಚಾರಣಾ ನ್ಯಾಯಾಲಯದ ಆದೇಶ ಪ್ರಶ್ನಿಸಿ ಸಂತ್ರಸ್ತ ಬಾಲಕಿ ಹೈಕೋರ್ಟ್ ಗೆ ಮೇಲ್ಮನವಿ ಸಲ್ಲಿಸಿದ್ದಾರೆ.
ಲೈಂಗಿಕ ದೌರ್ಜನ್ಯದ ಬಗ್ಗೆ ಸ್ಪಷ್ಟ ಹೇಳಿಕೆ ನೀಡಿದ್ದರೂ ಪರಿಗಣಿಸಿಲ್ಲ. ದೂರು ಅಸಹಜ, ನಂಬಲಸಾಧ್ಯವೆಂಬುದಕ್ಕೆ ಸೂಕ್ತ ಕಾರಣ ನೀಡಿಲ್ಲ ಎಂದು ತಿಳಿಸಿದ್ದಾರೆ. ತಂದೆ, ತಾಯಿ, ಗೆಳತಿಯರಿಗೆ ಬಾಲಕಿ ವಿಷಯ ತಿಳಿಸಿಲ್ಲವೆಂಬುದು ಅಸಹಜವಲ್ಲ. ಸ್ವಾಮೀಜಿ ಖಾಸಗಿ ಕೋಣೆಗೆ ಹಿಂದಿನ ಬಾಗಿಲಿತ್ತು ಎಂಬುದನ್ನು ಪರಿಶೀಲಿಸಿಲ್ಲ. ಸ್ವತಃ ಸ್ಥಳ ಪರಿಶೀಲನೆ ಕೋರಿದ್ದರೂ ಕೋರ್ಟ್ ಅದನ್ನು ಪರಿಗಣಿಸಿಲ್ಲ ಎಂದು ಹೇಳಲಾಗಿದೆ.
ಸಿಸಿಟಿವಿ ಇಲ್ಲದಿರುವುದರಿಂದ ದೃಶ್ಯಾವಳಿ ಸಲ್ಲಿಸುವ ಪ್ರಶ್ನೆ ಉದ್ಭವಿಸುವುದಿಲ್ಲ. ಹಾಸ್ಟೆಲ್ ನಲ್ಲಿನ 13 ಬಾಲಕಿಯರಲ್ಲಿ ನಾಲ್ವರು ವಿದ್ಯಾರ್ಥಿನಿಯರನ್ನು ವಿಚಾರಣೆಗೊಳಪಡಿಸಿದ್ದಾರೆ. ಪ್ರತಿಕೂಲ ಸಾಕ್ಷಿಗಳನ್ನೇ ಪರಿಗಣಿಸಿ ಘಟನೆ ನಡೆದಿಲ್ಲವೆಂಬುದು ಸರಿಯಲ್ಲ. ಬಾಲಕಿ ಹೇಳಿಕೆ ಪರಿಗಣಿಸಬೇಕೆ ವಿನಹ ವೈದ್ಯರ ವರದಿಯನ್ನಲ್ಲ, ಸುಳ್ಳು ಆರೋಪ ಹೊರಿಸುವುದರಿಂದ ಲಾಭವಿಲ್ಲ ಎಂಬುದನ್ನು ಪರಿಗಣಿಸಿಲ್ಲ. ಸ್ವಾಮೀಜಿ ಬಗ್ಗೆ ಎಸ್.ಕೆ. ಬಸವರಾಜನ್ ಅವರಿಗೆ ವೈಷಮ್ಯವಿತ್ತು ಎಂಬುದು ಸರಿಯಲ್ಲ. ತೀರ್ಪು ರದ್ದುಪಡಿಸಿ ಮುರುಘಾ ಶರಣರನ್ನು ಶಿಕ್ಷಿಸುವಂತೆ ಕೋರಿ ಮೇಲ್ಮನವಿ ಸಲ್ಲಿಸಲಾಗಿದೆ.
