SHOCKING: ಫ್ರಿಡ್ಜ್​ ಒಳಗೆ ಮಾಡೆಲ್​ ಕಾಲು ಪತ್ತೆ…..! ರುಂಡ ಮುಂಡಕ್ಕಾಗಿ ಪೊಲೀಸರ ಶೋಧ

ಹಾಂಗ್ ಕಾಂಗ್: ಪ್ರೇಯಸಿಯನ್ನು, ಪತ್ನಿಯನ್ನು ಕೊಂದು ಫ್ರಿಡ್ಜ್​ನಲ್ಲಿ ಇಡುವಂಥ ಉದಾಹರಣೆಗಳು ಇತ್ತೀಚಿನ ದಿನಗಳಲ್ಲಿ ಭಾರಿ ಆತಂಕ ಸೃಷ್ಟಿಸಿದೆ. ಭಾರತದಲ್ಲಿ ಕೆಲವು ಘಟನೆಗಳು ನಡೆದಿರುವ ನಡುವೆಯೇ ಇದೀಗ ಹಾಂಗ್​ಕಾಂಗ್​ನಲ್ಲಿಯೂ ಇಂಥದ್ದೇ ಆತಂಕಕಾರಿ ಘಟನೆ ನಡೆದಿದೆ
ಮನೆಯೊಂದರ ರೆಫ್ರಿಜರೇಟರ್‌ ನಲ್ಲಿ ಬಹುದಿನಗಳಿಂದ ಕಾಣೆಯಾಗಿದ್ದ 28 ವರ್ಷದ ಮಾಡೆಲ್ ಅಬ್ಬಿ ಚೋಯ್ ಅವರ ಕಾಲುಗಳು ಪತ್ತೆಯಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರ ವಿರುದ್ಧ ಹಾಂಗ್ ಕಾಂಗ್ ಪೊಲೀಸರು ದೂರು ದಾಖಲಿಸಿಕೊಂಡಿದ್ದಾರೆ.

ರೂಪದರ್ಶಿಯ ತಲೆ, ಮುಂಡ ಮತ್ತು ಕೈಗಳು ಇನ್ನೂ ಪತ್ತೆ ಮಾಡಲಾಗಿಲ್ಲ. ಪೊಲೀಸ್ ಹೇಳಿಕೆಯ ಪ್ರಕಾರ, ಈಕೆ L’Officiel Monaco ಎಂಬ ಫ್ಯಾಷನ್ ಮ್ಯಾಗಜೀನ್‌ನ ಡಿಜಿಟಲ್ ಮುಖಪುಟದಲ್ಲಿ ಇತ್ತೀಚೆಗೆ ಕಾಣಿಸಿಕೊಂಡಿದ್ದರು. ಈಕೆ ಕಣ್ಮರೆಯಾಗಿರುವ ಕುರಿತು ಪಾಲಕರು ದೂರು ದಾಖಲಿಸಿದ ಬಳಿಕ ತನಿಖೆಯಿಂದ ಇದು ಬಹಿರಂಗಗೊಂಡಿದೆ.

ಪ್ರಕರಣದಲ್ಲಿ ನಾಲ್ವರನ್ನು ಬಂಧಿಸಲಾಗಿದೆ ಮತ್ತು ಮೂವರ ಮೇಲೆ ಆರೋಪ ಹೊರಿಸಲಾಗಿದೆ ಎಂದು ಪೊಲೀಸ್ ಹೇಳಿಕೆಗಳು ತಿಳಿಸಿವೆ. ಆರೋಪಿಗಳ ಹೆಸರು ಇದುವರೆಗೆ ಬಹಿರಂಗವಾಗಿಲ್ಲ. ಆದರೆ ಘಟನೆಗೆ ಸಂಬಂಧಿಸಿದಂತೆ ಈಕೆಯ ಮಾಜಿ ಪತಿ ಅಲೆಕ್ಸ್ ಕ್ವಾಂಗ್ ಅವರನ್ನೂ ಪೊಲೀಸರು ಬಂಧಿಸಿ ತನಿಖೆ ನಡೆಸುತ್ತಿದ್ದಾರೆ. ಜೊತೆಗೆ ಮಾಜಿ ಮಾವ ಮತ್ತು ಅವರ ಸಹೋದರನ ಮೇಲೆ ಕೊಲೆ ಆರೋಪ ಹೊರಿಸಲಾಗಿದೆ. ಅತ್ತೆಯನ್ನೂ ಬಂಧಿಸಲಾಗಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read