ಪತ್ನಿಗೆ ಬೈದಿದ್ದನ್ನು ಪ್ರಶ್ನಿಸಿದ ಪತಿ ಬರ್ಬರ ಹತ್ಯೆ

ಬಳ್ಳಾರಿ: ಪತ್ನಿಗೆ ಅವಾಚ್ಯ ಪದಗಳಿಂದ ಬೈದಿದ್ದನ್ನು ಪ್ರಶ್ನೆ ಮಾಡಲು ಹೋದ ಯುವಕನನ್ನು ಬರ್ಬರವಾಗಿ ಹತ್ಯೆ ಮಾಡಲಾಗಿದೆ.

ವಿಜಯನಗರ ಜಿಲ್ಲೆ ಹಗರಿಬೊಮ್ಮನಹಳ್ಳಿ ಜೆಸ್ಕಾಂ ಕಚೇರಿ ಸಮೀಪ ಘಟನೆ ನಡೆದಿದೆ. ಬಂಗಾರಿ ಮಂಜುನಾಥ ಮೃತಪಟ್ಟ ವ್ಯಕ್ತಿ. ನೆರೆಮನೆಯ ದಾಯಾದಿಗಳು ಆತನ ಪತ್ನಿಗೆ ಬೈದಿದ್ದನ್ನು ಪ್ರಶ್ನಿಸಲು ಹೋದಾಗ ಚಾಕು, ರಾಡ್ ನಿಂದ ಥಳಿಸಿ ಕೊಲೆ ಮಾಡಿದ್ದಾರೆ.

ಬಂಗಾರಿ ಮಂಜುನಾಥ್ ಅವರ ದಾಯಾದಿ ಬಂಗಾರಿ ಹನುಮಂತ ಕುಟುಂಬದವರಿಗೆ ಹಿಂದಿನಿಂದಲೂ ದ್ವೇಷ ಇತ್ತು. ಆಸ್ತಿ, ನಿವೇಶನ, ಹಣಕಾಸಿನ ವಿಚಾರವಾಗಿ ಎರಡೂ ಕುಟುಂಬದವರ ನಡುವೆ ಜಗಳವಾಗುತ್ತಿತ್ತು. ಬಂಗಾರಿ ಮಂಜುನಾಥನನ್ನು ಮುಗಿಸಲು ಕಾಯುತ್ತಿದ್ದ ಹನುಮಂತನ ಕುಟುಂಬದವರು ಕೊಲೆ ಮಾಡಿದ್ದಾರೆ ಎನ್ನಲಾಗಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read