ತಮ್ಮನೊಂದಿಗೆ ಸೇರಿ ಮಹಿಳೆಯಿಂದ ಘೋರ ಕೃತ್ಯ: ಸಿಮೆಂಟ್ ಇಟ್ಟಿಗೆಯಿಂದ ಹೊಡೆದು ಕಾಟ ಕೊಡ್ತಿದ್ದವನ ಕೊಲೆ

ಮೈಸೂರು: ಮಹಿಳೆಗೆ ಬ್ಲಾಕ್ ಮೇಲ್ ಮಾಡುತ್ತಿದ್ದ ವ್ಯಕ್ತಿಯನ್ನು ಕೊಲೆ ಮಾಡಿದ ಘಟನೆ ಮೈಸೂರು ಜಿಲ್ಲೆ ನಂಜನಗೂಡು ಪಟ್ಟಣದಲ್ಲಿ ನಡೆದಿದೆ.

ಸಿಮೆಂಟ್ ಇಟ್ಟಿಗೆಯಿಂದ ಹೊಡೆದು 32 ವರ್ಷದ ರಾಜೇಶ್ ಎಂಬುವನನ್ನು ಕೊಲೆ ಮಾಡಲಾಗಿದೆ. ಹೆಚ್.ಡಿ. ಕೋಟೆ ತಾಲೂಕಿನ ಸಿದ್ದಯ್ಯನಹುಂಡಿ ನಿವಾಸಿಯಾಗಿರುವ ರಾಜೇಶ್ ನನ್ನು ಮಹಿಳೆ ಹಾಗೂ ಆಕೆಯ ಸಹೋದರ ಕೊಲೆ ಮಾಡಿದ್ದಾರೆ.

ಆರೋಪಿಗಳಾದ ಪ್ರೇಮಾ ಮತ್ತು ಆಕೆಯ ಸಹೋದರ ಶಿವು ಅವರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. 15 ವರ್ಷದ ಹಿಂದೆ ಮೈಸೂರಿನ ಕ್ಯಾತಮಾರನಹಳ್ಳಿ ನಿವಾಸಿಯಾಗಿರುವ ಪ್ರೇಮಾಗೆ ನಂಜನಗೂಡಿನ ಶ್ರೀರಾಂಪುರ ನಿವಾಸಿ ಜೊತೆ ಮದುವೆಯಾಗಿತ್ತು. ಒಂದು ತಿಂಗಳ ಹಿಂದೆ ಪ್ರೇಮಾ ಪತಿ ಆತ್ಮಹತ್ಯೆ ಮಾಡಿಕೊಂಡಿದ್ದ. ಈ ವೇಳೆ ಪತಿಯ ಸ್ನೇಹಿತ ರಾಜೇಶನ ಪರಿಚಯವಾಗಿತ್ತು. ಪರಿಚಯ ಸಲುಗೆಯಾಗಿ ಇಬ್ಬರು ಆತ್ಮೀಯವಾಗಿದ್ದರು.

ಕೆಲ ದಿನಗಳ ಬಾಳಿಕ ಇಬ್ಬರ ನಡುವೆ ಭಿನ್ನಾಭಿಪ್ರಾಯ ಮೂಡಿತ್ತು. ಪ್ರೇಮಾ ಗೆ ಬ್ಲಾಕ್ ಮೇಲ್ ಮಾಡಿ ರಾಜೇಶ್ ಬೆದರಿಸುತ್ತಿದ್ದ. ಇದರಿಂದ ಬೇಸತ್ತು ಸೋದರನೊಂದಿಗೆ ಸೇರಿ ಸಿಮೆಂಟ್ ಇಟ್ಟಿಗೆಯಿಂದ ಹೊಡೆದು ರಾಜೇಶ್ ನನ್ನು ಕೊಲೆ ಮಾಡಲಾಗಿದೆ ಎನ್ನಲಾಗಿದೆ. ನಂಜನಗೂಡು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read