ಸಾಲ ಕೊಟ್ಟ ಮಹಿಳೆ ಜೀವ ತೆಗೆದ ಯುವಕ

ಶಿವಮೊಗ್ಗ: ಶಿವಮೊಗ್ಗ ಜಿಲ್ಲೆ ಹೊಸನಗರ ತಾಲೂಕು ಹುಂಚ ಗ್ರಾಮದ ಮುತ್ತಿನಕೆರೆಯಲ್ಲಿ ಜಯಮ್ಮ(62) ಅವರ ಶವ ಪತ್ತೆಯಾದ ಪ್ರಕರಣ ಭೇದಿಸಿದ ರಿಪ್ಪನ್ ಪೇಟೆ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ.

ಕೋಡೂರು ಯಳಗಲ್ಲು ಗ್ರಾಮದ ಮಯೂರ(24) ಮತ್ತು ಕಾನೂನು ಸಂಘರ್ಷಕ್ಕೆ ಒಳಗಾದ ಒಬ್ಬ ಬಾಲಕನನ್ನು ವಶಕ್ಕೆ ಪಡೆಯಲಾಗಿದೆ. ಶಿವಮೊಗ್ಗ ತಾಲ್ಲೂಕುಗಳಲು ಗ್ರಾಮದ ಆಶ್ರಮದಲ್ಲಿ ಜಯಮ್ಮ ಮತ್ತು ಮಯೂರನ ಅತ್ತೆ ಕೆಲಸ ಮಾಡುತ್ತಿದ್ದರು. ಅತ್ತೆಯ ಮೂಲಕ ಮಯೂರನಿಗೆ ಜಯಮ್ಮ ಪರಿಚಯವಾಗಿದ್ದು, ಅವರ ಬಳಿ 80 ಸಾವಿರ ರೂ. ಸಾಲ ಪಡೆದುಕೊಂಡಿದ್ದ ಎನ್ನಲಾಗಿದೆ.

ಪದೇ ಪದೇ ಸಾಲ ಕೊಡುವಂತೆ ಜಯಮ್ಮ ಕೇಳಿದ್ದರಿಂದ ಕೊಲೆ ಮಾಡಿರುವುದಾಗಿ ಆರೋಪಿ ವಿಚಾರಣೆ ವೇಳೆ ಪೊಲೀಸರಿಗೆ ತಿಳಿಸಿದ್ದಾನೆ. ರಿಪ್ಪನ್ ಪೇಟೆಯಲ್ಲಿ ನಿವೇಶನ ಕೊಡಿಸುವುದಾಗಿ ನಂಬಿಸಿ ಕಾರ್ ನಲ್ಲಿ ಜಯಮ್ಮನನ್ನು ಕರೆದುಕೊಂಡು ಹೋಗಿದ್ದು, ಬಾಳೂರು ಗ್ರಾಮದ ಬಳಿ ಕುತ್ತಿಗೆಗೆ ಹಗ್ಗ ಬಿಗಿದು ಕೊಲೆ ಮಾಡಿ ಅದೇ ರಾತ್ರಿ ಮೃತದೇಹವನ್ನು ಕೆರೆಗೆ ಎಸೆದು ಪರಾರಿಯಾಗಿದ್ದರು. ತನಿಖೆ ಕೈಗೊಂಡ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದು ಕೃತ್ಯಕ್ಕೆ ಬಳಸಿದ ಕಾರ್ ವಶಕ್ಕೆ ಪಡೆಯಲಾಗಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read