Bangalore PG murder case: ಮಾಜಿ ಗೆಳತಿಯನ್ನು ಕೊಲ್ಲಲು ಬಂದು ಆಕೆಯ ‘ರೂಮ್ ಮೇಟ್’ ಹತ್ಯೆಗೈದ ಪಾಪಿ

ಬೆಂಗಳೂರಿನ ಕೋರಮಂಗಲದ ಪಿಜಿ ಒಂದರಲ್ಲಿ ವಾಸವಾಗಿದ್ದ ಬಿಹಾರ ಮೂಲದ ಕೃತಿ ಎಂಬ ಯುವತಿಯ ಬರ್ಬರ ಹತ್ಯೆಯ ಬಳಿಕ ಈಗ ಇದರ ಹಿಂದಿನ ಕಾರಣ ಬಹಿರಂಗವಾಗಿದೆ. ಕೃತಿಯ ರೂಮ್ ಮೇಟ್ ಆಗಿದ್ದ ಯುವತಿ ಜೊತೆ ಗೆಳೆತನ ಹೊಂದಿದ್ದ ಯುವಕ ಆಕೆಯನ್ನು ಕೊಲ್ಲಲು ಬಂದ ವೇಳೆ ಕೃತಿಯನ್ನೇ ತನ್ನ ಗೆಳತಿ ಎಂದು ತಪ್ಪಾಗಿ ಭಾವಿಸಿ ಚೂರಿಯಿಂದ ಇರಿದು ಕೊಲೆ ಮಾಡಿರುವುದು ಬೆಳಕಿಗೆ ಬಂದಿದೆ.

ಪ್ರಕರಣದ ವಿವರ: ಜುಲೈ 24ರಂದು ಕೋರಮಂಗಲದ ಪಿಜಿಯಲ್ಲಿ ವಾಸವಾಗಿದ್ದ ಬಿಹಾರ ಮೂಲದ 24 ವರ್ಷದ ಕೃತಿ ಕುಮಾರಿ ಎಂಬಾಕೆಯ ಕತ್ತು ಸೀಳಿ ಹತ್ಯೆ ಮಾಡಲಾಗಿತ್ತು. ಪಿ ಜಿ ವಾಚ್ ಮ್ಯಾನ್ ಊಟಕ್ಕೆ ತೆರಳಿದ್ದ ವೇಳೆ ಬೋಪಾಲ್ ನ ಅಭಿಷೇಕ್ ಎಂಬಾತ ರಾತ್ರಿ 11:10 ರಿಂದ 11:30 ಸಮಯದಲ್ಲಿ ಮೂರನೇ ಅಂತಸ್ತಿನಲ್ಲಿದ್ದ ಆಕೆಯ ರೂಮಿಗೆ ತೆರಳಿ ಕತ್ತು ಸೀಳಿ ಕೊಲೆ ಮಾಡಿದ್ದ.

ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ನಡೆದಿದ್ದ ಈ ಘಟನೆ ಸಾರ್ವಜನಿಕರನ್ನು ಬೆಚ್ಚಿ ಬೀಳಿಸಿತ್ತಲ್ಲದೆ ಹೊರ ರಾಜ್ಯ ಹಾಗೂ ನಗರಗಳಿಂದ ಬಂದವರು ಪಿಜಿ ಯಲ್ಲಿ ವಾಸ್ತವ್ಯ ಹೂಡುತ್ತಿದ್ದು, ಅವರ ಸುರಕ್ಷತೆಯ ಬಗ್ಗೆ ಪಿಜಿ ಮಾಲೀಕರುಗಳು ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ ಎಂಬ ಮಾತುಗಳು ಕೇಳಿ ಬಂದಿದ್ದವು. ಇನ್ನು ಕೊಲೆ ಪ್ರಕರಣದ ತನಿಖೆ ನಡೆಸುತ್ತಿದ್ದ ಪೊಲೀಸರು ತೀವ್ರ ವಿಚಾರಣೆ ನಡೆಸಿದ್ದರು.

ಇದೀಗ ಕೃತ್ಯದ ಕುರಿತು ಪೊಲೀಸರು ವಿವಿಧ ಆಯಾಮಗಳಲ್ಲಿ ಪರಿಶೀಲನೆ ನಡೆಸಿದ ವೇಳೆ ಹತ್ಯೆಯಾದ ಕೃತಿ ಕುಮಾರಿಗೂ ಹಾಗೂ ಆರೋಪಿ ಅಭಿಷೇಕ್ ಗೂ ಯಾವುದೇ ಸಂಬಂಧ ಇರಲಿಲ್ಲ ಎಂಬುದು ತಿಳಿದುಬಂದಿದೆ. ಕೃತಿ ಕುಮಾರಿ ರೂಮ್ ಮೇಟ್ ಅಭಿಷೇಕ್ ಗೆಳತಿಯಾಗಿದ್ದು, ಆದರೆ ಆಕೆ ಇತ್ತೀಚೆಗೆ ಆತನನ್ನು ದೂರ ಮಾಡಿದ್ದ ಕಾರಣ ಸೇಡು ತೀರಿಸಿಕೊಳ್ಳಲು ಆಕೆಯನ್ನು ಕೊಲೆ ಮಾಡಲು ಬಂದ ಅಭಿಷೇಕ್, ತಪ್ಪಾಗಿ ಭಾವಿಸಿ ಕೃತಿ ಕುಮಾರಿಯನ್ನು ಹತ್ಯೆ ಮಾಡಿದ್ದಾನೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read