ಬೆಳಗಾವಿ: 500 ರೂಪಾಯಿಗಾಗಿ ಸ್ನೇಹಿತನನ್ನೇ ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಬೆಳಗಾವಿ ಜಿಲ್ಲೆಯ ಯಳ್ಳೂರಿನಲ್ಲಿ ನಡೆದಿದೆ.
ಹುಸೇನ್ ತಾಶೇವಾಲೆ (45) ಮೃತ ದುರ್ದೈವಿ. ಮಿಥುನ್ ಕುಬಚಿ, ಮನೋಜ್ ಇಂಗಳೇ ಕೊಲೆಗೈದ ಆರೋಪಿಗಳು. ಗುಜರಿ ಸಾಮಾನು ವಿಚಾರವಾಗಿ ಸ್ನೇಹಿತರ ಮಧ್ಯೆ ಜಗಳವಾಗಿತ್ತು. ಹುಸೇನ್, ಆರೋಪಿಗಳಾದ ಮಿಥುನ್ ಹಾಗೂ ಮನೋಜ್ ಗೆ 500 ರೂಪಾಯಿ ಕೊಡಬೇಕಿತ್ತು. ಹಣ ಕೇಳಲು ಹುಸೇನ್ ಮನೆಗೆ ಇಬ್ಬರೂ ಹೋಗಿದ್ದರು. ಈ ವೇಳೆ ಗಲಾಟೆಯಾಗಿದೆ.
ಜಗಳ ವಿಕೋಪಕ್ಕೆ ತಿರುಗಿದ್ದು, ಹುಸೇನ್ ಹೊಟ್ಟೆಗೆ ಮಿಥುನ್ ಹಾಗೂ ಮನೋಜ್ ಇಬ್ಬರೂ ಮನಬಂದಂತೆ ಗುದ್ದಿದ್ದಾರೆ. ಗಂಭೀರವಾಗಿ ಹಲ್ಲೆಗೊಳಗಾದ ಹುಸೇನ್ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಪ್ರಕರಣ ಸಂಬಂಧ ಬೆಳಗಾವಿ ಗ್ರಾಮೀಣ ಠಾಣೆ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.