ಬೆಚ್ಚಿ ಬೀಳಿಸಿದ್ದ ಕೊಲೆ ಪ್ರಕರಣದಲ್ಲಿ ಮಾಜಿ ಶಾಸಕನ ಮಗ, ಮೊಮ್ಮಗ ಅರೆಸ್ಟ್

ಕಲಬುರಗಿ: ಕಲಬುರಗಿ ಜನರನ್ನು ಬೆಚ್ಚಿ ಬೀಳಿಸಿದ್ದ ಬೈಕ್ ಸವಾರನ ಕೊಲೆ ಪ್ರಕರಣದ ಪ್ರಮುಖ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ಆರೋಪಿಗಳಲ್ಲಿ ಒಬ್ಬಾತ ಮಾಜಿ ಶಾಸಕರ ಮೊಮ್ಮಗನಾಗಿದ್ದಾನೆ. ಕಲಬುರ್ಗಿಯ ಗಾಜಿಪೂರ ಮಹಾವೀರ ಚೌಕ್ ನಾಟಿಕಾರ್ ಗಲ್ಲಿಯ ಸ್ವರಾಜ್ ಹೊಡಲ್(19), ಬಾಲಕ,  ನಾಗರಾಜ್ ಹೊಡಲ್(48) ಅವರನ್ನು ಬಂಧಿಸಲಾಗಿದೆ.

ಸ್ವರಾಜ್ ತಂದೆ ನಾಗರಾಜ್ ಹೊಡಲ್ ಅವರ ಮೇಲೆ ಹತ್ಯೆಯ ನಂತರ ಕಾರ್, ಕೃತ್ಯಕ್ಕೆ ಬಳಸಿದ ಮಾರಕಾಸ್ತ್ರ ಬಚ್ಚಿಡಲು ಸಹಾಯ ಮಾಡಿದ ಆರೋಪವಿದೆ. ಸ್ವರಾಜ್ ಮಾಜಿ ಶಾಸಕ ದಿ. ದೇವಪ್ಪ ಹೊಡಲ್ ಅವರ ಮೊಮ್ಮಗನಾಗಿದ್ದಾನೆ.

ಚಿಂಚೋಳಿ ತಾಲೂಕಿನ ಚಂದನಕೇರಾ ಗ್ರಾಮದ ಪ್ರಮೋದ್ ನನ್ನು ಆರೋಪಿಗಳು ಮೇ 21 ರ ತಡರಾತ್ರಿ ಕೊಲೆ ಮಾಡಿದ್ದರು. ಪ್ರಮೋದ್ ಬೈಕ್ ನಲ್ಲಿ ಮನೆಗೆ ತೆರಳುವಾಗ ಪೂಜಾ ಕಾಲೋನಿಯಿಂದ ಸುಮಾರು ಒಂದೂವರೆ ಕಿಲೋಮೀಟರ್ ದೂರದವರೆಗೆ ಕಾರ್ ನಲ್ಲಿ ಇದ್ದ ಆರೋಪಿ ಸ್ವರಾಜ್ ಸೈಡ್ ನೀಡಿರಲಿಲ್ಲ. ಒಂದು ಬಾರಿ ಎಡಕ್ಕೆ ಮತ್ತೊಂದು ಬಾರಿ ಬಲಕ್ಕೆ ಇಂಡಿಕೇಟರ್ ಹಾಕಿ ವಿರುದ್ಧ ದಿಕ್ಕಿಗೆ ವಾಹನ ಚಲಿಸಿ ಸತಾಯಿಸುತ್ತಿದ್ದ. ಈ ರೀತಿ ತೊಂದರೆ ಕೊಡಬಾರದು ಎಂದು ಪ್ರಮೋದ್ ಬುದ್ಧಿಮಾತು ಹೇಳಿದ್ದಕ್ಕೆ ಮಾರಕಾಸ್ತ್ರದಿಂದ ದಾಳಿ ಮಾಡಿ ಕೊಲೆ ಮಾಡಲಾಗಿತ್ತು.

ಡಾನ್ ಆಗಬೇಕೆಂದುಕೊಂಡು ಸ್ವರಾಜ್ ಈ ರೀತಿ ಮಾಡಿದ್ದಾನೆ. ಈತ ಸುತ್ತಲಿನವರಿಂದ ಭಾಯ್ ಎಂದು ಕರೆಸಿಕೊಳ್ಳುತ್ತಿದ್ದ. ಮಾಜಿ ಶಾಸಕನ ರೌಡಿ ಶೀಟರ್ ಮೊಮ್ಮಗ ಕೊಲೆ ಪ್ರಕರಣದಲ್ಲಿ ಬಂಧಿತನಾಗಿರುವುದು ಗಾಬರಿ ತಂದಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read