ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ತಮ್ಮನೇ ಅಣ್ಣನನ್ನು ಕೊಲೆಗೈರುವ ಘಟನೆ ನಡೆದಿದೆ. ತಾಯುಯನ್ನು ಬೈದಿದ್ದಕ್ಕೆ ಅಣ್ಣನನ್ನು ತಮ್ಮನೇ ಹತ್ಯೆಗೈದಿದ್ದು, ಯಾರಬ್ ನಗದಲ್ಲಿ ನಡೆದುದೆ.
ಮುಜಾಹಿದ್ (35) ಕೊಲೆಯಾದ ಅಣ್ಣ. ಮೊಹಮ್ಮದ್ ಮುಸೇದ್ ಅಣ್ಣನನ್ನೇ ಕೊಂದ ತಮ್ಮ. ತಾಯಿಗೆ ಬೈದ ವಿಚಾರವಾಗಿ ಅಣ್ಣ-ತಮ್ಮನ ನಡುವೆ ಜಗಳವಾಗಿ ಗಲಾಟೆಯಲ್ಲಿ ಇಬ್ಬರೂ ಮನೆಯಲ್ಲಿದ್ದ ವಸ್ತುಗಳಿಂದ ಹೊಡೆದಾಡಿಕೊಂಡಿದ್ದರು.
ಹೊಡೆದಾಟದಲ್ಲಿ ಮೊಹಮ್ಮದ್ ಮುಸೇದ್, ಮುಜಾಹಿದ್ ನನ್ನು ಹತ್ಯೆಗೈದಿದ್ದಾನೆ. ಬನಶಂಕರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
