ಮುಂಬೈನ ಥಾಣೆಯಲ್ಲಿ ಹೃದಯ ವಿದ್ರಾವಕ ಘಟನೆಯೊಂದು ಬೆಳಕಿಗೆ ಬಂದಿದೆ. ಇಲ್ಲಿನ ಮುಂಬ್ರಾದಲ್ಲಿ ಕಟ್ಟಡದ ಐದನೇ ಮಹಡಿಯಿಂದ ನಾಯಿಯೊಂದು ಕೆಳಗೆ ಬಿದ್ದಿದೆ. ಅದು 3 ವರ್ಷದ ಬಾಲಕಿ ಮೇಲೆ ಬಿದ್ದ ಕಾರಣ ಬಾಲಕಿ ಸಾವನ್ನಪ್ಪಿದ್ದಾಳೆ. ಅಮೃತ್ ನಗರದ ಚಿರಾಗ್ ಮೇಸನ್ ಕಟ್ಟಡದಲ್ಲಿ ಈ ಘಟನೆ ನಡೆದಿದೆ. ಸಿಸಿ ಟಿವಿ ದುರಂತದ ಕ್ಷಣಗಳು ರೆಕಾರ್ಡ್ ಆಗಿವೆ.
ಐದನೇ ಮಹಡಿಯಿಂದ ನಾಯಿ ಬಿದ್ದಾಗ, ಬಾಲಕಿ ತನ್ನ ತಾಯಿ ಜೊತೆ ನಡೆದುಕೊಂಡು ಹೋಗ್ತಿದ್ದಳು. ನಾಯಿ ಆಕೆ ಮೇಲೆ ಬಿದ್ದಿದೆ. ತಕ್ಷಣ ಮಗುವನ್ನು ಆಸ್ಪತ್ರೆಗೆ ದಾಖಲಿಸಲಾಯ್ತಾದ್ರೂ ಪ್ರಯೋಜವಾಗ್ಲಿಲ್ಲ. ಆಸ್ಪತ್ರೆಯಲ್ಲಿ ಮಗು ಸಾವನ್ನಪ್ಪಿದೆ. ನಾಯಿಗೂ ಗಂಭೀರ ಗಾಯಗಳಾಗಿದ್ದು, ಚಿಕಿತ್ಸೆಗಾಗಿ ಪಶು ಆಸ್ಪತ್ರೆಗೆ ದಾಖಲಿಸಲಾಗಿದೆ.
ಸಾಮಾಜಿಕ ಜಾಲತಾಣದಲ್ಲಿ ಈ ವಿಡಿಯೋವನ್ನು ಹಂಚಿಕೊಳ್ಳಲಾಗಿದೆ. ವಿಡಿಯೋ ನೋಡಿದ ಬಳಕೆದಾರನೊಬ್ಬ ಇದು ಹತ್ಯೆ ಎಂದು ಆರೋಪ ಮಾಡಿದ್ದಾನೆ.
https://twitter.com/PrathmeshMetan1/status/1821039785651401196?ref_src=twsrc%5Etfw%7Ctwcamp%5Etweetembed%7Ctwterm%5E1821039785651401196%7Ctwgr%5E98e974b9ed8976bca6e6937bcd32c1de8e816388%7Ctwcon%5Es1_&ref_url=https%3A%2F%2Fm.dailyhunt.in%2Fnews%2Findia%2Fenglish%2Flatestly-epaper-dh91bfc27fb6cf46a58e6b6df12965bd61%2Fmumbrashocker3yearoldgirldiesafterdogfallsonherfrom5thfloordisturbingvideosurfaces-newsid-n625485716