ಬೈಕ್ನಲ್ಲಿ ಬಂದ ಯುವತಿಯೊಬ್ಬರು ಮುಂಬೈ ಟ್ರಾಫಿಕ್ ಪೊಲೀಸ್ ಅಧಿಕಾರಿಯೊಂದಿಗೆ ಮಾತಿನ ಚಕಮಕಿ ನಡೆಸುತ್ತಿರುವ ವಿಡಿಯೋ ಸೋಶಿಯಲ್ ಮೀಡಿಯಾಗಳಲ್ಲಿ ವೈರಲ್ ಆಗಿದೆ. ಮುಂಬೈನ ಬಾಂದ್ರಾ- ವರ್ಲಿ ಸೀ ಲಿಂಕ್ನಲ್ಲಿ ಸೆಪ್ಟೆಂಬರ್ 15ರಂದು ಈ ಘಟನೆ ನಡೆದಿದ್ದು ಇದೀಗ ವಿಡಿಯೋ ಆನ್ಲೈನ್ನಲ್ಲಿ ಹರಿದಾಡುತ್ತಿದೆ.
ನೂಪುರ್ ಪಟೇಲ್ ಎಂಬ 26 ವರ್ಷದ ಯುವತಿಯನ್ನು ಬಾಂದ್ರಾ ವರ್ಲಿ ಸೀ ಟ್ರಾಫಿಕ್ ಪೊಲೀಸರು ತಡೆದಿದ್ದರು. ಸಮುದ್ರದ ಸೇತುವೆಯ ಮೇಲೆ ಬೈಕ್ ಓಡಿಸಲು ಅನುಮತಿ ಇರಲಿಲ್ಲ. ಆದರೂ ಅಲ್ಲಿ ಬೈಕ್ ಓಡಿಸಿದ ಕಾರಣಕ್ಕೆ ಯುವತಿಯನ್ನು ಪೊಲೀಸರು ತಡೆದಿದ್ದಾರೆ. ನೂಪುರ್ ಮಧ್ಯ ಪ್ರದೇಶದ ಜಬಲ್ಪುರ ನಿವಾಸಿಯಾಗಿದ್ದು ಪುಣೆಯಲ್ಲಿರುವ ತನ್ನ ಸಹೋದರನನ್ನು ಭೇಟಿಯಾಗುತ್ತಿದ್ದಳು. ಇದೇ ವೇಳೆ ಮುಂಬೈನಲ್ಲಿರುವ ವರ್ಲಿ ಸೀ ಲಿಂಕ್ ನೋಡಬೇಕೆಂದು ಸಹೋದರನ ಬೈಕ್ ಎತ್ತಿಕೊಂಡು ನೂಪುರ್ ಬಂದಿದ್ದಳು ಎನ್ನಲಾಗಿದೆ.
ಸೀ ಲಿಂಕ್ನಲ್ಲಿ ಬೈಕ್ ನಿಲ್ಲಿಸಿದ ಪೊಲೀಸರನ್ನೇ ನೂಪುರ್ ಬೆದರಿಸಿದ್ದಾಳೆ. ಬೈಕ್ನಿಂದ ಇಳಿಯಲು ನಿರಾಕರಿಸಿದ ಯುವತಿಯು ಪೊಲೀಸ್ ಸಿಬ್ಬಂದಿಗೆ ಆವಾಜ್ ಹಾಕಿದ್ದಾಳೆ. ಪೊಲೀಸರು ಸಾಕಷ್ಟು ವಿನಂತಿ ಮಾಡಿದ ಬಳಿಕವೂ ನೂಪುರ್ ತನ್ನ ಅಸಭ್ಯ ವರ್ತನೆಯನ್ನು ಮುಂದುವರಿಸಿದ್ದಾಳೆ. ಅಲ್ಲದೇ ಪೊಲೀಸರನ್ನೇ ನಿಂದಿಸಿದ್ದಾಳೆ.
ನೂಪುರ್ಗೆ ಸೀ ಲಿಂಕ್ನಲ್ಲಿ ದ್ವಿಚಕ್ರ ವಾಹನಗಳಿಗೆ ಅವಕಾಶವಿಲ್ಲ ಎಂಬುದರ ಅರಿವಿರಲಿಲ್ಲ. ಆದರೂ ಪೊಲೀಸರ ಮಾತನ್ನ ಕೇಳಲು ಸಹ ಆಕೆ ತಯಾರಿರಲಿಲ್ಲ ಎನ್ನಲಾಗಿದೆ.
https://twitter.com/i/status/1705870153123238052