ಮುಂಜಾನೆಯ ಜಾಗಿಂಗ್‌ನಲ್ಲಿ ನಿರತರಾಗಿದ್ದ ಟೆಕ್ಕಿ ಮಹಿಳೆಯೊಬ್ಬರಿಗೆ ಕಾರೊಂದು ಗುದ್ದಿದ ಪರಿಣಾಮ ಆಕೆ ಸ್ಥಳದಲ್ಲೇ ಮೃತಪಟ್ಟ ಘಟನೆ ಮುಂಬಯಿಯ ವರ್ಲಿ ಸೀಫೇಸ್ ಬಳಿ ಸಂಭವಿಸಿದೆ.
ದಾದರ್ ಮಾತುಂಗಾ ಪ್ರದೇಶದ ನಿವಾಸಿ, 42 ವರ್ಷ ವಯಸ್ಸಿನ ರಾಜಲಕ್ಷ್ಮೀ ರಾಮ್ ಕೃಷ್ಣನ್ ಟೆಕ್ ಸಂಸ್ಥೆಯೊಂದರಲ್ಲಿ ಸಿಇಓ ಆಗಿ ಕರ್ತವ್ಯದಲ್ಲಿದ್ದರು. ವರ್ಲಿ ಮಿಲ್ಕ್ ಡೇರಿ ಬಳಿ ಬೆಳಿಗ್ಗೆ 6:30ರ ವೇಳೆ ಜಾಗಿಂಗ್ ಮಾಡುತ್ತಿದ್ದ ರಾಜಲಕ್ಷ್ಮಿಗೆ ಕಾರೊಂದು ಬಂದು ಗುದ್ದಿದ ರಭಸಕ್ಕೆ ಆಕೆ ಗಾಳಿಯಲ್ಲಿ ತೂರಿಕೊಂಡು ದೂರ ಹೋಗಿ ಬಿದ್ದಿದ್ದಾರೆ.
ತಲೆಗೆ ತೀವ್ರವಾದ ಗಾಯಗಳಾದ ಪರಿಣಾಮ ರಾಜಲಕ್ಷ್ಮೀ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಹತ್ತಿರದ ಪೊದ್ದರ್ ಆಸ್ಪತ್ರೆಗೆ ಆಕೆಯನ್ನು ಕೊಂಡೊಯ್ಯಲಾಯಿತಾದರೂ, ಅಷ್ಟರಲ್ಲಾಗಲೇ ಆಕೆಯ ಪ್ರಾಣ ಹೋಗಿರುವುದಾಗಿ ವೈದ್ಯರು ಘೋಷಿಸಿದ್ದಾರೆ.
ಸ್ಥಳೀಯ ನಿವಾಸಿಗಳು ಕಾರಿನ ಚಾಲಕ ಸುಮೇರ್ ಮರ್ಚೆಂಟ್‌ನನ್ನು (23) ಹಿಡಿದು ಆತನನ್ನು ಪೊಲೀಸರಿಗೆ ಒಪ್ಪಿಸಿದ್ದಾರೆ. ತಮ್ಮ ಸ್ನೇಹಿತೆಯನ್ನು ಶಿವಾಜಿ ಪಾರ್ಕ್‌ಗೆ ಬಿಟ್ಟು ಬರಲು ಸುಮೇರ್ ಹಾಗೂ ಆತನ ಸ್ನೇಹಿತರು ಹೋಗಿದ್ದ ವೇಳೆ ಈ ಅಪಘಾತ ಮಾಡಿದ್ದಾರೆ. ಭಾರೀ ವೇಗದಲ್ಲಿ ಚಲಿಸುತ್ತಿದ್ದ ಕಾರಣ ಸುಮೇರ್‌ನ ಟಾಟಾ ನೆಕ್ಸಾನ್ ಎಲೆಕ್ಟ್ರಿಕ್ ಕಾರು ರಸ್ತೆಯ ವಿಭಜಕಕ್ಕೆ ಢಿಕ್ಕಿ ಹೊಡೆದು ನಿಯಂತ್ರಣ ತಪ್ಪಿ ರಾಜಲಕ್ಷ್ಮಿಗೆ ಗುದ್ದಿದೆ.
ಫಿಟ್ನೆಸ್ ಬಗ್ಗೆ ಒಲವಿದ್ದ ರಾಜಲಕ್ಷ್ಮಿ ಸದಾ ಜಾಗಿಂಗ್ ಮಾಡುತ್ತಿದ್ದರು ಹಾಗೂ ಇಲ್ಲಿನ ಶಿವಾಜಿ ಪಾರ್ಕ್‌ನಲ್ಲಿ ಗುಂಪುಗಳೊಂದಿಗೆ ಭಾನುವಾರದ ಜಾಗಿಂಗ್ ಮಾಡುತ್ತಿದ್ದರು
https://twitter.com/IamShajanSamuel/status/1637341700719869953?ref_src=twsrc%5Etfw%7Ctwcamp%5Etweetembed%7Ctwterm%5E1637341700719869953%7Ctwgr%5Eb91d1c69c8d41969132d176d492f6f7d85136ac1%7Ctwcon%5Es1_&ref_url=https%3A%2F%2Feconomictimes.indiatimes.com%2Fnews%2Findia%2Fmumbai-tech-firm-ceo-dies-after-being-hit-by-car-while-jogging-at-worli-sea-face%2Farticleshow%2F98772126.cms