Viral Video | ಪದವಿ ಸ್ವೀಕಾರ ಸಮಾರಂಭದಲ್ಲಿ ವಿದ್ಯಾರ್ಥಿ ಡಾನ್ಸ್;‌ ಪ್ರಮಾಣ ಪತ್ರ ನೀಡಲು ನಿರಾಕರಿಸಿದ ಪ್ರಾಂಶುಪಾಲ

Mumbai Student's Dance During Graduation Ceremony Takes An Unexpected Turn; Here's What Happened Next - Culture

ವಿದ್ಯಾರ್ಥಿ ಜೀವನದಲ್ಲಿ ಡಿಗ್ರಿ ಸ್ವೀಕಾರ ದಿನ ದಿನವ ಅತ್ಯಂತ ಮಹತ್ವದ ಮತ್ತು ಸ್ಮರಣೀಯ ದಿನಗಳಲ್ಲಿ ಒಂದಾಗಿರಲಿದೆ ಎಂಬುದರಲ್ಲಿ ಎರಡು ಮಾತಿಲ್ಲ. ಡಿಗ್ರಿ ಸ್ವೀಕರಿಸಲು ವಿಶೇಷ ವೇಷಭೂಷಣ ಹಾಕಿಕೊಂಡು ಬಂದು ಗಮನ ಸೆಳೆಯುವುದು, ಹಾಸ್ಯ ಮಾಡುವುದು ಅಲ್ಲಲ್ಲಿ ನಡೆಯುವುದಿದೆ.

ಇಲ್ಲೊಂದು ಡಿಗ್ರಿ ಪ್ರದಾನ ಸಮಾರಂಭದಲ್ಲಿ ವಿದ್ಯಾರ್ಥಿ ಡ್ಯಾನ್ಸ್ ಮಾಡಿದ್ದಾನೆ. ಮುಂಬೈನಲ್ಲಿ ವಿದ್ಯಾರ್ಥಿಯೊಬ್ಬರು ತನ್ನ ಪದವಿಯನ್ನು ಸ್ವೀಕರಿಸಲು ಮುಂದಾದ ವೇಳೆ ನೃತ್ಯ ಮಾಡುತ್ತಿರುವ ವಿಡಿಯೋ ವೈರಲ್ ಆಗಿದೆ.

ವೀಡಿಯೊದಲ್ಲಿ, ನರ್ಸೀ ಮೊಂಜಿ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್ ಸ್ಟಡೀಸ್‌ನ ವಿದ್ಯಾರ್ಥಿ ಆರ್ಯ ಕೊಠಾರಿ ಬಾಲಿವುಡ್ ಹಾಡಿನ ತೇನು ಲೇಕೆಗೆ ಪೂರ್ವಸಿದ್ಧತೆಯಿಲ್ಲದ ಡ್ಯಾನ್ಸ್ ಮಾಡುತ್ತಿರುವುದು ಪ್ರೇಕ್ಷಕರನ್ನು ಅಚ್ಚರಿಗೊಳಿಸಿದೆ.

ವೇದಿಕೆಯಲ್ಲಿದ್ದ ಪ್ರಾಧ್ಯಾಪಕರು ಆ ಡ್ಯಾನ್ಸ್‌ಗೆ ಪ್ರಭಾವಿತರಾಗದೆ ಪದವಿ ನೀಡಲು ನಿರಾಕರಿಸಿದರು. ಒಬ್ಬ ಅಧ್ಯಾಪಕರು, ಹೆಚ್ಚು ಅಸಮಾಧಾನಗೊಂಡಂತೆ ಕಾಣಿಸಿದೆ. “ನಾವು ನಿನಗೆ ಪ್ರಮಾಣಪತ್ರ ನೀಡುವುದಿಲ್ಲ” ಎಂದು ಹೇಳುವುದನ್ನು ಕೇಳಬಹುದು.

ಇಂತಹ ಕೃತ್ಯಗಳನ್ನು ಇಲ್ಲಿ ಅನುಮತಿಸಲಾಗುವುದಿಲ್ಲ ಎಂದು ಇನ್ನೊಬ್ಬ ಉಪನ್ಯಾಸಕರು ಹೇಳುವುದನ್ನು ಸಹ ಕಾಣಬಹುದು. ಬಳಿಕ ಕೊಠಾರಿ ಕ್ಷಮೆಯಾಚಿಸಿದಾಗ ಅಧ್ಯಾಪಕರು ಅವರಿಗೆ ಡಿಪ್ಲೊಮಾ ಡಿಗ್ರಿ ನೀಡಿದರು, ”ಮುಂದೆ ಈ ರೀತಿ ಮಾಡಲು ಸಾಧ್ಯವಿಲ್ಲ” ಎಂದು ಎಚ್ಚರಿಸಿದರು.

ಈ ವೀಡಿಯೋ ವೈರಲ್ ಆಗಿದ್ದು, ಪ್ರತಿಕ್ರಿಯೆಗಳ ಮಹಾಪೂರವೇ ಹರಿದುಬರುತ್ತಿದೆ. ಇಂತಹ ಸಣ್ಣ ಚಟುವಟಿಕೆಯಲ್ಲಿ ಯಾವುದೇ ತಪ್ಪಿಲ್ಲ ಎಂದು ಹಲವರು ಹೇಳಿದ್ದಾರೆ. ವಿದ್ಯಾರ್ಥಿಯ ಕೃತ್ಯವು ಅನಗತ್ಯ ಎಂದು ಕೆಲವರು ಭಾವಿಸಿದರು.

https://www.youtube.com/shorts/L-1LJMhzntg?feature=share

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read