ಪೊಲೀಸ್ ಚಾಲಕರೊಬ್ಬರು ತಮ್ಮ ಸೇವೆಯ ಕೊನೆಯ ದಿನದಂದು ಪೊಲೀಸ್ ಅಧಿಕಾರಿಯೊಬ್ಬರಿಂದ ಭಾವಪೂರ್ಣ ಗೌರವ ಪಡೆಯುತ್ತಿರುವ ವಿಡಿಯೋವೊಂದು ವೈರಲ್ ಆಗಿದೆ.
ನಿವೃತ್ತಿಯಾಗಲಿದ್ದ ಹಿರಿಯ ಚಾಲಕನ ಸೇವೆಯ ಕೊನೆಯ ದಿನದಂದು ಅವರನ್ನು ಕಾರಿನಲ್ಲಿ ಕೂರಿಸಿಕೊಂಡ ಹಿರಿಯ ಇನ್ಸ್‌ಪೆಕ್ಟರ್ ಒಬ್ಬರು ಖುದ್ದು ತಾವೇ ಡ್ರೈವ್ ಮಾಡುವ ಮೂಲಕ ಅವರಿಗೆ ನಮನ ಸಲ್ಲಿಸಿದ್ದಾರೆ.
ಮುಂಬಯಿಯ ಗಾಮ್ದೇವಿ ಪೊಲೀಸ್ ಠಾಣೆಯಲ್ಲಿ ಜರುಗಿದ ಈ ಘಟನೆಯಲ್ಲಿ, 36 ವರ್ಷಗಳ ಸೇವೆ ಸಲ್ಲಿಸಿ ನಿವೃತ್ತಿ ಪಡೆಯುತ್ತಿರುವ ಎಎಸ್‌ಐ ಸುನೀಲ್ ಮೋರೆ ಹೆಸರಿನ ಹಿರಿಯ ಚಾಲನಿಗೆ ತಮ್ಮ ಠಾಣಾ ಸಿಬ್ಬಂದಿಯಿಂದ ಮನಮುಟ್ಟುವ ಗೌರವ ಸಿಕ್ಕಿದೆ. ಮೋರೆಯ ಸೇವೆಯ ಗೌರವಾರ್ಥ ಅವರಿಗೆ ಹೂವಿನ ಸುರಿಮಳೆಯ ಸನ್ಮಾನದೊಂದಿಗೆ, ಹಿರಿಯ ಪೊಲೀಸ್ ಇನ್ಸ್‌ಪೆಕ್ಟರ್ ಶಶಿಕಾಂತ್ ಯಾದವ್ ಅವರು ಮೋರೆರನ್ನು ಪೊಲೀಸ್ ಕಾಲೋನಿಯಲ್ಲಿರುವ ಅವರ ಮನೆಗೆ ಬಿಟ್ಟು ಬಂದಿದ್ದಾರೆ.
ಹಿರಿಯ ಅಧಿಕಾರಿಯ ಈ ನಡೆಯು ನೆಟ್ಟಿಗರ ಹೃದಯ ಗೆದ್ದಿದೆ. ಕಾಮೆಂಟ್‌ಗಳ ರೂಪದಲ್ಲಿ ಅವರ ಈ ಗೌರವಕ್ಕೆ ಅಪಾರ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ ನೆಟ್ಟಿಗರು.
https://twitter.com/Rajmajiofficial/status/1641910109583572992?ref_src=twsrc%5Etfw%7Ctwcamp%5Etweetembed%7Ctwterm%5E1641910109583572992%7Ctwgr%5E9ae9da7c4a2543d8c6cd56b7eca78d34b865e3ca%7Ctwcon%5Es1_&ref_url=https%3A%2F%2Fwww.freepressjournal.in%2Fviral%2Fmumbai-retired-police-driver-gets-heartwarming-farewell-by-gamdevi-senior-inspector-who-steers-the-wheel-for-him-in-viral-video