CSK ಐಪಿಎಲ್ ಟ್ರೋಫಿ ಗೆದ್ದ ನಂತರ ಧೋನಿಗಾಗಿ ವಿಶೇಷ ಪೋಸ್ಟ್ ಹಂಚಿಕೊಂಡ ಮುಂಬೈ ಪೊಲೀಸ್

ಗುಜರಾತ್ ಟೈಟಾನ್ಸ್ ತಂಡವನ್ನು 5 ವಿಕೆಟ್‌ಗಳಿಂದ ಸೋಲಿಸುವ ಮೂಲಕ ಸಿಎಸ್‌ಕೆ ತಂಡವು 2023 ರ ಟ್ರೋಫಿಯನ್ನು ಎತ್ತಿಹಿಡಿದಿದೆ. ಸಿಎಸ್‌ಕೆ ಮತ್ತು ಎಂಎಸ್ ಧೋನಿ ಅಭಿಮಾನಿಗಳಿಗೆ ಇದು ಭಾವನಾತ್ಮಕ ಐಪಿಎಲ್ ಫೈನಲ್ ಪಂದ್ಯವಾಗಿತ್ತು.‌

ಎಂಎಸ್ ಧೋನಿ ಡಕ್‌ನಲ್ಲಿ ಔಟಾದರೂ, ಅಭಿಮಾನಿಗಳು ಒಂದು ಸೆಕೆಂಡ್ ಕೂಡ ಚೆನ್ನೈ ಸೂಪರ್ ಕಿಂಗ್ಸ್‌ ಪರವಾಗಿ ಜೈಕಾರ ಹಾಕುವುದನ್ನು ನಿಲ್ಲಿಸಲಿಲ್ಲ. ಎಲ್ಲಾ ಸಮಯದಲ್ಲೂ ಧೋನಿಯ ನಡೆ ವ್ಯಾಪಕ ಪ್ರಶಂಸೆಗೆ ಪಾತ್ರವಾಗಿದೆ.

ಭರ್ಜರಿ ಗೆಲುವಿನ ನಂತರ, ಸಾಮಾಜಿಕ ಮಾಧ್ಯಮಗಳಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ಮತ್ತು ವಿಶೇಷವಾಗಿ ಧೋನಿಗೆ ಅಭಿನಂದನಾ ಸಂದೇಶಗಳು ಹರಿದುಬಂದವು. ಮುಂಬೈ ಪೊಲೀಸರೂ ಕೂಡ ಇದರಿಂದ ಹೊರತಾಗಿಲ್ಲ. ಎಂಎಸ್ ಧೋನಿ ಅವರ ಐಕಾನಿಕ್ ನಂಬರ್ 7 ಜೆರ್ಸಿ ಧರಿಸಿರುವ ಚಿತ್ರವನ್ನು ಇಲಾಖೆ ಹಂಚಿಕೊಂಡಿದೆ. ನಿಲ್ಲಿಸಿ, ಯೋಚಿಸಿ ಮತ್ತು ನಂತರ ಮೂವ್ ಮಾಡಿ. ಚಾಂಪಿಯನ್‌ಗಳು ಯಾವಾಗಲೂ ನಿಯಮಗಳ ಪ್ರಕಾರ ಆಡುತ್ತಾರೆ. ಸಿಗ್ನಲ್ ಅನ್ನು ಎಂದಿಗೂ ಜಂಪ್ ಮಾಡುವುದಿಲ್ಲ ಎಂದು ಶೀರ್ಷಿಕೆ ನೀಡಿದ್ದಾರೆ.

ಮುಂಬೈ ಪೊಲೀಸರು ಹಂಚಿಕೊಂಡ ಈ ಪೋಸ್ಟ್ 21 ಸಾವಿರಕ್ಕೂ ಹೆಚ್ಚು ಲೈಕ್‌ಗಳನ್ನು ಗಳಿಸಿದ್ದು, ಅನೇಕ ಪ್ರತಿಕ್ರಿಯೆಗಳನ್ನು ಪಡೆದುಕೊಂಡಿದೆ. ಜನರು ಧೋನಿಯ ಕ್ರಿಕೆಟ್ ವೃತ್ತಿಜೀವನವನ್ನು ಶ್ಲಾಘಿಸುವುದನ್ನು ನಿಲ್ಲಿಸಲು ಸಾಧ್ಯವಾಗಲಿಲ್ಲ. ಐಪಿಎಲ್‌ನ ಇನ್ನೊಂದು ಋತುವನ್ನು ಆಡುವಂತೆ ಜನ ಮನವಿ ಮಾಡಿದ್ರು.

ಅಂದಹಾಗೆ, ಚೆನ್ನೈ ಸೂಪರ್ ಕಿಂಗ್ಸ್ ಇದೀಗ ಐದು ಐಪಿಎಲ್ ಪ್ರಶಸ್ತಿಗಳ ಮುಂಬೈ ಇಂಡಿಯನ್ಸ್ ದಾಖಲೆಯನ್ನು ಸರಿಗಟ್ಟಿದೆ. ತಮ್ಮ 10 ನೇ ಐಪಿಎಲ್ ಫೈನಲ್‌ನಲ್ಲಿ ಮುನ್ನಡೆ ಸಾಧಿಸಿದ ಎಂಎಸ್ ಧೋನಿ, ರೋಹಿತ್ ಶರ್ಮಾ ಅವರೊಂದಿಗೆ ಸಮಬಲ ಸಾಧಿಸಿದ್ದಾರೆ. ಇಬ್ಬರೂ ನಾಯಕರಾಗಿ ಈಗ ಐದು ಐಪಿಎಲ್ ಪ್ರಶಸ್ತಿಗಳನ್ನು ಹೊಂದಿದ್ದಾರೆ.

Champions Never Miss A Signal': After CSK's IPL Win, Mumbai Police's Tribute To MS Dhoni Goes Viral | Sports News, Times Now

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read