BIG NEWS:‌ ‘ಆದಿಪುರುಷ್’ ಚಿತ್ರದ ಸಂಭಾಷಣೆಕಾರರಿಗೆ ಜೀವ ಬೆದರಿಕೆ; ಪೊಲೀಸರಿಂದ ಭದ್ರತೆ

ಪಾತ್ರಧಾರಿಗಳ ವೇಷಭೂಷಣ, ವಿಎಫ್ಎಕ್ಸ್ ಮತ್ತು ಸಂಭಾಷಣೆಯ ಕಾರಣದಿಂದ ತೀವ್ರ ವಿವಾದಕ್ಕೀಡಾಗಿರುವ ಆದಿಪುರುಷ್ ಚಿತ್ರದ ಸಂಭಾಷಣೆಕಾರರಿಗೆ ಜೀವಬೆದರಿಕೆ ಎದುರಾಗಿದೆ.

ಆದಿಪುರುಷ್ ಚಿತ್ರದ ಸಂಭಾಷಣೆ ಬರೆದ ಮನೋಜ್ ಮುಂತಾಶಿರ್ ಅವರಿಗೆ ಮುಂಬೈ ಪೊಲೀಸರು ಭದ್ರತೆ ಒದಗಿಸಿದ್ದಾರೆ. ಜೀವ ಬೆದರಿಕೆ ಹಿನ್ನೆಲೆಯಲ್ಲಿ ಭದ್ರತೆಯನ್ನು ಕೋರಿದ ನಂತರ ಅವರಿಗೆ ಪೊಲೀಸರು ರಕ್ಷಣೆ ಒದಗಿಸಿದ್ದಾರೆ. ‌

ಚಿತ್ರದಲ್ಲಿನ ಪಾತ್ರಗಳು ಬಳಸಿದ ಸಂಭಾಷಣೆಗಳ ಬಗ್ಗೆ ಆದಿಪುರುಷ್ ಚಲನಚಿತ್ರವು ವಿವಾದಕ್ಕೆ ಸಿಲುಕಿದ ನಂತರ ಈ ಬೆಳವಣಿಗೆಯಾಗಿದೆ. ಜೀವಬೆದರಿಕೆ ಕುರಿತು ತನಿಖೆ ನಡೆಸುತ್ತಿರುವುದಾಗಿ ಪೊಲೀಸರು ಖಚಿತಪಡಿಸಿದ್ದಾರೆ.

ಏತನ್ಮಧ್ಯೆ, ವಾರಣಾಸಿಯಲ್ಲಿ ಜನರ ಗುಂಪು ಪ್ರತಿಭಟನೆ ನಡೆಸಿ ಚಿತ್ರದ ಪೋಸ್ಟರ್‌ಗಳನ್ನು ಹರಿದು ಹಾಕಿತು. ಹಿಂದೂ ಮಹಾಸಭಾ ಸೋಮವಾರ ನಿರ್ಮಾಪಕರ ವಿರುದ್ಧ ಲಕ್ನೋ ಪೊಲೀಸರಿಗೆ ದೂರು ನೀಡಿದೆ.

ಸಮಾಜವಾದಿ ಪಕ್ಷ ಚಿತ್ರತಂಡದ ವಿರುದ್ಧ ಕಿಡಿಕಾರಿದ್ದು ಕೀಳು ಮತ್ತು ಕಳಪೆ ಸಂಭಾಷಣೆಗಳಿಂದ ಚಿತ್ರವು ಧಾರ್ಮಿಕ ಭಾವನೆಗಳಿಗೆ ನೋವುಂಟು ಮಾಡಿದೆ ಎಂದು ಆರೋಪಿಸಿದೆ.

https://twitter.com/ANI/status/1670735248647409666?ref_src=twsrc%5Etfw%7Ctwcamp%5Etweetembed%7Ctwterm%5E1670735248647409666%7Ctwgr%5Ebe24a5e9843dbe36289aa69a0599a400d7b505ba%7Ctwcon%5Es1_&ref_url=https%3A%2F%2Fwww.deccanherald.com%2Fnational%2Fmumbai-police-provide-security-to-dialogue-writer-of-adipurush-1229147.html

 

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read