ಮನೆ ಶಿಫ್ಟ್​ ನೆಪದಲ್ಲಿ‌ ಮಹಿಳೆಗೆ ವಂಚನೆ; ಓರ್ವ ಅರೆಸ್ಟ್

ಮುಂಬೈ: ಮೂವರ್ಸ್ ಮತ್ತು ಪ್ಯಾಕರ್ಸ್ ಕಂಪೆನಿಯೊಂದರ ಸಿಬ್ಬಂದಿ ಎಂದು ಹೇಳಿಕೊಂಡು ಮಹಿಳೆಯೊಬ್ಬರಿಗೆ 2,500 ರೂಪಾಯಿ ವಂಚಿಸಿದ ಆರೋಪದ ಮೇಲೆ 26 ವರ್ಷದ ಯುವಕನನ್ನು ಮುಂಬೈನಲ್ಲಿ ಬಂಧಿಸಲಾಗಿದೆ.

ಸಂತ್ರಸ್ತೆ ತನ್ನ ಮನೆಯನ್ನು ಭೋಯಿವಾಡದಿಂದ ದಕ್ಷಿಣ ಮುಂಬೈನ ವರ್ಲಿ ಪ್ರದೇಶಕ್ಕೆ ಸ್ಥಳಾಂತರಿಸುತ್ತಿದ್ದಾಗ ಡಿಸೆಂಬರ್‌ನಲ್ಲಿ ಈ ಘಟನೆ ಸಂಭವಿಸಿತ್ತು. ನಾಲ್ಕು ಜನರ ಗುಂಪು ಮೂವರ್ಸ್ ಮತ್ತು ಪ್ಯಾಕರ್ ಎಂದು ಹೇಳಿಕೊಂಡು ಆಕೆಯ ನಿವಾಸಕ್ಕೆ ಬಂದು ಪ್ಯಾಕಿಂಗ್ ಪ್ರಕ್ರಿಯೆಯನ್ನು ಪ್ರಾರಂಭಿಸಿತು.

ಅವರು ತನ್ನ ಮನೆಯಲ್ಲಿ ಎಲ್ಲಾ ವಸ್ತುಗಳನ್ನು ಪ್ಯಾಕ್ ಮಾಡುವ ಕೆಲಸವನ್ನು ಉತ್ತಮವಾಗಿ ಮಾಡುತ್ತಿದ್ದರಿಂದ ಸಂತ್ರಸ್ತೆ ಅವರ ಬಗ್ಗೆ ಅನುಮಾನಿಸಲಿಲ್ಲ. ಆದಾಗ್ಯೂ, ಸ್ವಲ್ಪ ಸಮಯದ ನಂತರ ಅವರು ಅವಳ ಟೆಲಿವಿಷನ್ ಸೆಟ್ ಅನ್ನು ತೆಗೆದುಕೊಂಡಿದ್ದು ನಿವಾಸ ತೊರೆದವರು ಮತ್ತೆ ಹಿಂತಿರುಗಿಲ್ಲ. ಆಗ ಆಕೆಗೆ ಮೋಸ ಹೋಗಿರುವುದು ಅರಿವಿಗೆ ಬಂದಿದೆ.

ಪೊಲೀಸರು ತನಿಖೆ ಆರಂಭಿಸಿದ್ದು, ನಾಲ್ವರು ಶಂಕಿತರಲ್ಲಿ ಒಬ್ಬ ಥಾಣೆ ಜಿಲ್ಲೆಯ ಡೊಂಬಿವಲಿ ಪ್ರದೇಶದಲ್ಲಿದ್ದಾರೆ ಎಂಬ ಸುಳಿವು ಸಿಕ್ಕಿದೆ ಎಂದು ಹಿರಿಯ ಪೊಲೀಸ್ ಇನ್ಸ್‌ಪೆಕ್ಟರ್ ಜಿತೇಂದ್ರ ಪವಾರ್ ಖಚಿತಪಡಿಸಿದ್ದಾರೆ. ಒಬ್ಬ ಶಂಕಿತನನ್ನು ಬಂಧಿಸಲಾಗಿದ್ದು, ಇನ್ನೂ ಮೂವರು ತಲೆಮರೆಸಿಕೊಂಡಿದ್ದು, ಅವರನ್ನು ಹಿಡಿಯಲು ಶೋಧ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಬಂಧಿತ ಆರೋಪಿಯನ್ನು ಡೊಂಬಿವಿಲಿ ನಿವಾಸಿ ಸಂತೋಷ್ ಕೃಷ್ಣಕುಮಾರ್ ಮಿಶ್ರಾ (26) ಎಂದು ಗುರುತಿಸಲಾಗಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read