ವಿಚಾರಣೆ ವೇಳೆ ಬಹಿರಂಗವಾಯ್ತು ಶಾಕಿಂಗ್‌ ಸತ್ಯ….! ಶಾರುಖ್ ಮೇಕಪ್ ರೂಂ ನಲ್ಲಿ ಅಡಗಿಕೊಂಡಿದ್ದರು ಅಭಿಮಾನಿಗಳು

ಇತ್ತೀಚೆಗೆ ಮುಂಬೈನಲ್ಲಿರುವ ಬಾಲಿವುಡ್ ಸೂಪರ್‌ಸ್ಟಾರ್ ಶಾರುಖ್ ಖಾನ್ ಅವರ ಮನೆ ಮನ್ನತ್ ಪ್ರವೇಶಿಸಲು ಯತ್ನಿಸಿದ್ದ ಇಬ್ಬರು ಸತತ 8 ಗಂಟೆ ಕಾಲ ಶಾರುಖ್ ಖಾನ್ ಅವರ ಮೇಕಪ್ ರೂಂನಲ್ಲೇ ಅಡಗಿದ್ದ ಶಾಕಿಂಗ್‌ ಸಂಗತಿ ಗೊತ್ತಾಗಿದೆ.

ಟೈಮ್ಸ್ ಆಫ್ ಇಂಡಿಯಾದ ವರದಿಯ ಪ್ರಕಾರ, ಎಸ್‌ಆರ್‌ಕೆ ಅವರ ಅಭಿಮಾನಿಗಳು ಎಂದು ಹೇಳಿಕೊಂಡ ಇಬ್ಬರು ಶಾರುಖ್ ಖಾನ್ ಗೆ ಸರ್ ಪ್ರೈಸ್ ನೀಡಲು 8 ಗಂಟೆಗಳ ಕಾಲ ಅವರ ಮನೆಯೊಳಗೆ ಅಡಗಿಕೊಂಡಿದ್ದರಂತೆ.

ಮನ್ನತ್‌ನ ಮೂರನೇ ಮಹಡಿಯಲ್ಲಿರುವ ಎಸ್‌ಆರ್‌ಕೆ ಅವರ ಮೇಕಪ್ ರೂಮ್‌ನಲ್ಲಿ ಇಬ್ಬರೂ ಅಡಗಿಕೊಂಡಿದ್ದರು ಎಂದು ವರದಿಯಾಗಿದೆ. ಪ್ರಸ್ತುತ ಆ ಕೋಣೆ ರಿಪೇರಿಯಲ್ಲಿದೆ. ರಾತ್ರಿ 2 ಗಂಟೆಗೆ ಮನೆಯೊಳಗೆ ಹತ್ತಲು ರಿಪೇರಿಗಾಗಿ ಹಾಕಿದ್ದ ಅಟ್ಟಣಿಗೆ ಬಳಸಿದ್ದಾರೆ ಎನ್ನಲಾಗಿದೆ.

ನಂತರ ಅವರು 10:30 ರ ವರೆಗೆ ಮೇಕಪ್ ಕೋಣೆಯಲ್ಲಿ ಅಡಗಿಕೊಂಡಿದ್ದರುರು . ಈ ವೇಳೆ ಶಾರುಖ್ ಖಾನ್ ಕೋಣೆಗೆ ಪ್ರವೇಶಿಸಿದಾಗ ಅಪರಿಚಿತ ವ್ಯಕ್ತಿಗಳನ್ನು ನೋಡಿ ಆಘಾತಕ್ಕೊಳಗಾದರು. ನಂತರ ಭದ್ರತಾ ಸಿಬ್ಬಂದಿಗೆ ಮಾಹಿತಿ ನೀಡಿದ ಅವರು ಇಬ್ಬರನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.

ಅಭಿಮಾನಿಗಳಿಬ್ಬರು 18 ಮತ್ತು 19 ವರ್ಷ ವಯಸ್ಸಿನವರಾಗಿದ್ದು, ಕೂಲಿ ಕಾರ್ಮಿಕ ಮತ್ತು ತರಕಾರಿ ಮಾರಾಟಗಾರರಾಗಿದ್ದಾರೆ. ಶಾರುಖ್ ನ ನೋಡಲು ಇಬ್ಬರೂ ಗುಜರಾತ್‌ನ ಭರೂಚ್‌ನಿಂದ ಬಂದಿದ್ದರು. ಇದಕ್ಕಾಗಿ ಅವರು ಮನ್ನತ್ ಗೋಡೆ ಹತ್ತಿ ಮನೆಯೊಳಗೆ ಪ್ರವೇಶಿಸಿದ್ದರು.‌

ನಂತರ ಅವರನ್ನು ಎಸ್‌ಆರ್‌ಕೆಯ ಭದ್ರತಾ ಸಿಬ್ಬಂದಿ ಬಾಂದ್ರಾ ಪೊಲೀಸರಿಗೆ ಹಸ್ತಾಂತರಿಸಿದ್ದರು. ಅವರನ್ನು ವಿಚಾರಣೆಗೊಳಪಡಿಸಿ ಅತಿಕ್ರಮಣ ಪ್ರವೇಶ ಹಿನ್ನೆಲೆಯಲ್ಲಿ ಪ್ರಕರಣ ದಾಖಲಿಸಲಾಯಿತು.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read