5 ವರ್ಷದ ಬಾಲಕಿ ಮೇಲೆ ಅತ್ಯಾಚಾರವೆಸಗಿದ ಅಪ್ರಾಪ್ತ ಅರೆಸ್ಟ್

ಐದು ವರ್ಷದ ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ ಆರೋಪದ ಮೇಲೆ ಮುಂಬೈನ ನಾಗ್ಪಾಡಾ ಪೊಲೀಸ್ ಠಾಣೆಯ ಅಧಿಕಾರಿಗಳು ನಲ್ಲಸೊಪಾರದಿಂದ ಅಪ್ರಾಪ್ತ ವಯಸ್ಕನನ್ನು ಬಂಧಿಸಿದ್ದಾರೆ. ಘಟನಾ ಸ್ಥಳದ ಸಮೀಪದಲ್ಲಿದ್ದ ಸಿಸಿಕ್ಯಾಮೆರಾ ದೃಶ್ಯಾವಳಿಗಳನ್ನು ಜಾಲಾಡಿದ ನಂತರ ಪೊಲೀಸರು ಶಂಕಿತನ ಪತ್ತೆಗೆ ಬಲೆ ಬೀಸಿದ್ದರು.

ಶನಿವಾರ ಸಂಜೆ ಬಾಲಕಿ ಶಾಲೆಯ ಕಾಂಪೌಂಡ್‌ನಲ್ಲಿ ಕುಳಿತು ಅಳುತ್ತಿದ್ದುದನ್ನು ದಾರಿಹೋಕರೊಬ್ಬರು ಕಂಡಾಗ ವಿಷಯ ಬಹಿರಂಗವಾಗಿದೆ. ಮಗುವಿನ ಹೇಳಿಕೆಯಂತೆ, ಶಂಕಿತನು ಆಕೆಯ ಬಾಯಿಯನ್ನು ಹಿಡಿದು ಶಾಲೆಯ ಕಾಂಪೌಂಡ್‌ನಲ್ಲಿರುವ ಏಕಾಂತ ಸ್ಥಳಕ್ಕೆ ಕರೆದೊಯ್ದು ಅತ್ಯಾಚಾರವೆಸಗಿದ್ದನು. ತನ್ನ ಮೇಲೆ ಅತ್ಯಾಚಾರ ಮಾಡುವ ಮೊದಲು ಅವನು ತನ್ನನ್ನು ಹೊಡೆದ ಎಂದು ಬಾಲಕಿ ಹೇಳಿದ್ದಾಳೆ. ಬಾಲಕಿಯ ತಂದೆ ಅಪರಿಚಿತ ವ್ಯಕ್ತಿಯ ವಿರುದ್ಧ ಅತ್ಯಾಚಾರ ಪ್ರಕರಣ ದಾಖಲಿಸಿದ್ದಾರೆ.

ಪೊಲೀಸರು ಆರಂಭದಲ್ಲಿ ಆರೋಪಿಯ ನಿವಾಸವನ್ನು ಜಾಲಾಡಿದ್ದರು. ಆತನ ಪತ್ತೆಗಾಗಿ ನಾಗ್ಪಾಡಾದಿಂದ ಪ್ರಾರಂಭಿಸಿ ಬಾಂದ್ರಾ, ಖಾರ್, ಜೋಗೇಶ್ವರಿ, ಚೆಂಬೂರ್ ಮತ್ತು ನಲ್ಲಸೊಪಾರವನ್ನು ಒಳಗೊಂಡ ಆತನ ಕುಟುಂಬಸ್ಥರ ಸ್ಥಳಗಳಿಗೆ ತಂಡಗಳನ್ನು ಕಳಿಸಲಾಗಿತ್ತು.

ಶಂಕಿತನನ್ನು ಅಂತಿಮವಾಗಿ ಸಂಬಂಧಿಕರ ಸ್ಥಳದಲ್ಲಿ ಪತ್ತೆ ಮಾಡಲಾಯಿತು. 15 ವರ್ಷದ ಬಾಲಕನನ್ನು ಭಾನುವಾರ ಮುಂಜಾನೆ ಬಂಧಿಸಿ ಠಾಣೆಗೆ ಕರೆತಂದಿದ್ದು, ಆತ ತಪ್ಪೊಪ್ಪಿಕೊಂಡಿದ್ದಾನೆ ಎನ್ನಲಾಗಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read