ಯುವಕನೊಬ್ಬ ಕಾರ್ ನ ಕಿಟಕಿಯಲ್ಲಿ ಕುಂತು ಪ್ರಯಾಣ ಮಾಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡ್ತಿದ್ದು ಭಾರೀ ಆಕ್ರೋಶ ವ್ಯಕ್ತವಾಗಿದೆ. ಮುಂಬೈ ನಿವಾಸಿಯೊಬ್ಬರು ಪೋಸ್ಟ್ ಮಾಡಿದ ವೀಡಿಯೊದಲ್ಲಿ, ಒಬ್ಬ ಹುಡುಗನು ಚಲಿಸುತ್ತಿರುವ ಕಾರಿನಲ್ಲಿ ಕಿಟಕಿಯಲ್ಲಿ ಒರಗಿ ಕೂತಿದ್ದಾನೆ.
ಹುಡುಗನು ಚಲಿಸುತ್ತಿರುವ ಕಾರಿನಲ್ಲಿ ಅಪಾಯಕರ ರೀತಿಯಲ್ಲಿ ಒರಗಿ ಕುಳಿತಿದ್ದನ್ನ ಕಂಡ ಹುಡುಗಿ ತನ್ನ ಫೋನ್ ಕ್ಯಾಮೆರಾದಲ್ಲಿ ಚಿತ್ರೀಕರಿಸಿದ್ದಾಳೆ.
ಟ್ರಾಫಿಕ್ ನಿಯಮಗಳಿಗೆ ಅವಿಧೇಯರಾಗುವ ಮತ್ತು ರಸ್ತೆ ಸುರಕ್ಷತೆಗೆ ಅಪಾಯವನ್ನುಂಟುಮಾಡುವ ಈ ಯುವಕನ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ಟೀಕೆಗೆ ಗುರಿಯಾಗಿದೆ. ಟ್ವಿಟರ್ ಬಳಕೆದಾರರಾದ ರಾಜ್ ಮಜಿ ಅವರು ನೀಡಿದ ಮಾಹಿತಿಯಂತೆ ಮಂಗಳವಾರ ಸಂಜೆ 7:30ಕ್ಕೆ ಮಂಖುರ್ದ್ ಮೇಲ್ಸೇತುವೆಯಿಂದ ಛೇಡಾ ನಗರದ ಕಡೆ ಹೋಗುವಾಗ ಕಾರ್ ನಲ್ಲಿ ಕುಳಿತ ವ್ಯಕ್ತಿ ಈ ರೀತಿ ವರ್ತಿಸಿದ್ದಾನೆ.
https://twitter.com/RoadsOfMumbai/status/1612866435025633280?ref_src=twsrc%5Etfw%7Ctwcamp%5Etweetembed%7Ctwterm%5E1612866435025633280%7Ctwgr%5E3fe20ded9580d9f13183132d1897a824e04d91b0%7Ctwcon%5Es1_&ref_url=https%3A%2F%2Fwww.freepressjournal.in%2Fmumbai%2Fwatch-video-mumbai-boy-leans-out-of-moving-cars-window-to-perform-road-stunt-girl-records-the-act