ಮುಂಬೈ ಲೋಕಲ್ ರೈಲಿನಲ್ಲಿ ಮತ್ತೊಂದು ಅವಘಡ; ವಿಡಿಯೋ ವೈರಲ್

ಮುಂಬೈ ಲೋಕಲ್ ಟ್ರೈನ್‌ ನಲ್ಲಿ ಅಪಘಾತವೊಂದು ಸಂಭವಿಸಿದೆ. ರೈಲಿನ ಬಾಗಿಲಿಗೆ ನೇತಾಡುತ್ತಿದ್ದ ವ್ಯಕ್ತಿ  ಸಿಗ್ನಲ್‌ ಕಂಬಕ್ಕೆ ಡಿಕ್ಕಿ ಹೊಡೆದು ಗಾಯಗೊಂಡಿದ್ದಾನೆ. ಇದನ್ನು ವಿಡಿಯೋ ಮಾಡಲಾಗಿದ್ದು, ಆ ವಿಡಿಯೋ ಈಗ ವೇಗವಾಗಿ ವೈರಲ್‌ ಆಗ್ತಿದೆ.

ಸಾಮಾಜಿಕ ಜಾಲತಾಣ ಎಕ್ಸ್‌ ನಲ್ಲಿ ಇದ್ರ ವಿಡಿಯೋವನ್ನು ಹಂಚಿಕೊಳ್ಳಲಾಗಿದೆ. ವಿಡಿಯೋದಲ್ಲಿ ಆರಂಭದಲ್ಲಿ ವೇಗವಾಗಿ ಚಲಿಸುತ್ತಿರುವ ರೈಲಿನ ಬಾಗಿಲಿಗೆ ಜನರು ಜೋತು ಬಿದ್ದಿರೋದನ್ನು ನೀವು ನೋಡ್ಬಹುದು. ಈ ವೇಳೆ ಸಿಗ್ನಲ್‌ ಕಂಬಕ್ಕೆ ವ್ಯಕ್ತಿ ಡಿಕ್ಕಿ ಹೊಡೆದ ಕಾರಣ ಕೆಳಗೆ ಬಿದ್ದಿದ್ದಾನೆ.  ಥಾಣೆ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ. 18 ವರ್ಷದ ಕಾರ್ಮಿಕ ಗಂಭೀರವಾಗಿ ಗಾಯಗೊಂಡಿದ್ದಾನೆ. ಯುವಕ ಕಲ್ವಾದ ಭಾಸ್ಕರ್ ನಗರದ ನಿವಾಸಿ ಎನ್ನಲಾಗಿದೆ. ಅವರ ಹೆಸರು ಡ್ಯಾನಿಶ್ ಹುಸೇನ್ ಖಾನ್. ಆತನಿಗೆ ಗಂಭೀರ ಗಾಯಗಳಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.

ಮುಂಬೈ ಲೋಕಲ್ ಟ್ರೈನ್‌ ಅಲ್ಲಿನವರ ಜೀವಾಳ. ಪ್ರತಿ ದಿನ ಲಕ್ಷಾಂತರ ಮಂದಿ ಇದ್ರಲ್ಲಿ ಪ್ರಯಾಣ ಬೆಳೆಸ್ತಾರೆ. ಸಮಯಕ್ಕೆ ಸರಿಯಾಗಿ ಕಚೇರಿಗೆ ತಲುಪುವ ಆತುರದಲ್ಲಿ ಜನರು ಟ್ರೈನ್‌‌ ಒಳಗೆ ನುಗ್ಗುತ್ತಾರೆ. ಟ್ರೈನ್‌ ಬಾಗಿಲಿಗೆ ಜೋತುಬಿದ್ದು ಪ್ರಯಾಣ ಬೆಳೆಸುವವರ ಸಂಖ್ಯೆ ಸಾಕಷ್ಟಿದೆ.

https://twitter.com/MumRail/status/1816533250996863261?ref_src=twsrc%5Etfw%7Ctwcamp%5Etweetembed%7Ctwterm%5E1816533250996863261%7Ctwgr%5Eac4592176bdef20242e1bef48bc425a8f5fdca68%7Ctwcon%5Es1_&ref_url=https%3A%2F%2Fwww.latestly.com%2Fsocially%2Findia%2Fnews%2Fmumbai-local-train-freak-accident-man-hanging-outside-moving-train-falls-off-after-being-struck-by-pole-disturbing-video-surfaces-6138829.html

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read