ಮುಡಾ ಹಗರಣ ಚರ್ಚೆಗೆ ಆಗ್ರಹಿಸಿ ವಿಪಕ್ಷಗಳ ಪ್ರತಿಭಟನೆ: ಕೆಟ್ಟ ಸಂಪ್ರದಾಯ ಮುಂದುವರೆಸಲ್ಲ; ನಿಯಮಗಳ ವಿರುದ್ಧ ನಡೆಯುವುದೂ ಇಲ್ಲ; ಸ್ಪೀಕರ್ ಖಡಕ್ ಹೇಳಿಕೆ

ಬೆಂಗಳೂರು: ಮುಡಾ ಅಕ್ರಮ ಪ್ರಕರಣವನ್ನು ಸದನದಲ್ಲಿ ಚರ್ಚೆ ನಡೆಸಲು ಅವಕಾಶ ನೀಡುವಂತೆ ಆಗ್ರಹಿಸಿ ಬಿಜೆಪಿ ಹಾಗೂ ಜೆಡಿಎಸ್ ಸದಸ್ಯರು ಅಹೋರಾತ್ರಿ ವಿಧಾನಸೌಧದಲ್ಲಿ ನಡೆಸಿದ ಪ್ರತಿಭಟನೆಗೆ ಸ್ಪೀಕರ್ ಯು.ಟಿ.ಖಾದರ್ ಗರಂ ಆಗಿದ್ದಾರೆ.

ಕೆಟ್ಟ ಸಂಪ್ರದಾಯವನ್ನು ಮುಂದುವರೆಸಲ್ಲ. ನಿಯಮದ ಪ್ರಕಾರವೇ ಚರ್ಚೆಗಳು ನಡೆಯಬೇಕು ಎಂದು ಸ್ಪೀಕರ್ ಖಾದರ್ ಖಡಕ್ ಆಗಿ ಹೇಳಿದ್ದಾರೆ.

ಈಗಾಗಲೇ ವಾಲ್ಮೀಕಿ ನಿಗಮದ ಹಗರಣದ ಚರ್ಚೆಯಾಗಿದೆ. ನಾಲ್ಕೈದು ದಿನ ಅಲ್ಲಿಯೇ ಹೋಯಿತು. ಇನ್ನೂ ಹಲವು ಮಸೂದೆಗಳ ಮಂಡನೆ ಬಾಕಿಯಿದೆ. ಸಾಕಷ್ಟು ವಿಷಯಗಳ ಬಗ್ಗೆ ಚರ್ಚೆ ನಡೆಯುವುದಿದೆ. ಕಲಾಪಕ್ಕೆ ಅಡ್ಡಿಪಡಿಸುತ್ತಾ ಇದೇ ರೀತಿ ಕಲಾಪ ಮುಂದುವರೆದರೆ ಕಷ್ಟವಾಗುತ್ತದೆ. ಸದನದ ನಿಯಮಾವಳಿಗಳ ಪ್ರಕಾರ ಚರ್ಚೆ ನಡೆಸಲು ಅವಕಾಶವಿದೆ ಹೊರತು ನಿಯಮ ಮುರಿಯುವ ಕೆಟ್ಟ ಸಂಪ್ರದಾಯಕ್ಕೆ ಅವಕಾಶವಿಲ್ಲ ಎಂದು ಹೇಳಿದರು.

ಆಡಳಿತ ವಿಪಕ್ಷದವರ ಎಲ್ಲಾ ಚರ್ಚೆಗೆ ಅವಕಾಶ ಕೊಟ್ಟಿದ್ದೇವೆ ತನಿಖೆ ನಡೆಯುತ್ತಿರುವಾಗಲೇ ವಾಲ್ಮೀಕಿ ಹಗರಣದ ಚರ್ಚೆಯಾಗಿದೆ. ಮತ್ತೆ ಈಗ ಮುಡಾ ಹಗರಣದ ಬಗ್ಗೆ ಮಧ್ಯೆ ಚರ್ಚೆ ಇಲ್ಲ ಎಂದರು.

ಆದರೆ ವಿಪಕ್ಷ ಬಿಜೆಪಿ ಸದಸ್ಯರು ಚರ್ಚೆಗೆ ಅವಕಾಶ ನೀಡುವವರೆಗೂ ಧರಣಿ ಕೈಬಿಡುವುದಿಲ್ಲ ಎಂದು ಹೇಳಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read