BIG NEWS: 15 ಕೋಟಿ ಉದ್ಯೋಗಾವಕಾಶ ಸೃಷ್ಟಿಸುವ ಮೂಲಕ ಮಹತ್ವದ ಮೈಲಿಗಲ್ಲು ಸಾಧಿಸಿದ MSME ವಲಯ

ನವದೆಹಲಿ: ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳು, MSME ವಲಯವು 15 ಕೋಟಿಗೂ ಹೆಚ್ಚು ಉದ್ಯೋಗಾವಕಾಶಗಳನ್ನು ಸೃಷ್ಟಿಸುವ ಮೂಲಕ ಮಹತ್ವದ ಮೈಲಿಗಲ್ಲನ್ನು ಸಾಧಿಸಿದೆ.

ಕೇಂದ್ರ ಎಂಎಸ್‌ಎಂಇ ಸಚಿವ ನಾರಾಯಣ ರಾಣೆ ಈ ಮಾಹಿತಿ ನೀಡಿದ್ದು, ಉದ್ಯಮ ಪೋರ್ಟಲ್‌ ನಲ್ಲಿ ಮೂರು ಕೋಟಿಗೂ ಹೆಚ್ಚು ಎಂಎಸ್‌ಎಂಇ ಘಟಕಗಳ ನೋಂದಣಿಯೊಂದಿಗೆ ಈ ಸಾಧನೆಯನ್ನು ಸುಗಮಗೊಳಿಸುವಲ್ಲಿ ಉದ್ಯಮ ಪೋರ್ಟಲ್‌ನ ಪ್ರಮುಖ ಪಾತ್ರ ಪ್ರಮುಖವಾಗಿದೆ. ಈ ಮೂರು ಕೋಟಿ ನೋಂದಾಯಿತ ಎಂಎಸ್‌ಎಂಇಗಳಲ್ಲಿ 41 ಲಕ್ಷಕ್ಕೂ ಹೆಚ್ಚು ಮಹಿಳಾ ಒಡೆತನದ ಎಂಎಸ್‌ಎಂಇಗಳಾಗಿವೆ. ಸೃಷ್ಟಿಯಾದ 15 ಕೋಟಿ ಉದ್ಯೋಗಾವಕಾಶಗಳ ಪೈಕಿ 3.4 ಕೋಟಿಗೂ ಹೆಚ್ಚು ಉದ್ಯೋಗಾವಕಾಶಗಳನ್ನು ಮಹಿಳೆಯರು ಹೊಂದಿದ್ದಾರೆ ಎಂದು ತಿಳಿಸಿದ್ದಾರೆ.

ಎಂಎಸ್‌ಎಂಇ ಸಚಿವಾಲಯವು ಎಂಎಸ್‌ಎಂಇಗಳನ್ನು ಸಕ್ರಿಯವಾಗಿ ಉತ್ತೇಜಿಸುತ್ತಿದೆ. ಹೊಸ ಜೀವನೋಪಾಯಗಳನ್ನು ಸೃಷ್ಟಿಸುತ್ತಿದೆ ಮತ್ತು ದೇಶಾದ್ಯಂತ ಯುವಕರನ್ನು ಸಬಲೀಕರಣಗೊಳಿಸುತ್ತಿದೆ. ಸರ್ಕಾರದ ನಿರಂತರ ಬೆಂಬಲ ಮತ್ತು ಉಪಕ್ರಮಗಳು MSME ವಲಯವನ್ನು ಮತ್ತಷ್ಟು ಬಲಪಡಿಸುತ್ತದೆ, ಭಾರತದ ಆರ್ಥಿಕ ಬೆಳವಣಿಗೆ ಮತ್ತು ಸಮೃದ್ಧಿಗೆ ಕೊಡುಗೆ ನೀಡುತ್ತದೆ ಎಂದು ಹೇಳಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read