ಧೋನಿ, ಸುಶಾಂತ್ ಅಭಿಮಾನಿಗಳಿಗೆ ಗುಡ್ ನ್ಯೂಸ್ ; ಎಂಎಸ್ ಧೋನಿ: ದಿ ಅನ್‌ಟೋಲ್ಡ್ ಸ್ಟೋರಿ ಮತ್ತೆ ರಿಲೀಸ್

ಮೃತ ನಟ ಸುಶಾಂತ್ ಸಿಂಗ್ ರಜಪೂತ್ ಮತ್ತು ಸ್ಟಾರ್ ಕ್ರಿಕೆಟಿಗ ಮಹೇಂದ್ರ ಸಿಂಗ್ ಧೋನಿ ಅಭಿಮಾನಿಗಳಿಗೆ ಸಿಹಿಸುದ್ದಿ. ಎಂ.ಎಸ್. ಧೋನಿ ಜೀವನಾಧಾರಿತ ಹಿಟ್ ಚಿತ್ರ ‘ಎಂಎಸ್ ಧೋನಿ: ದಿ ಅನ್‌ಟೋಲ್ಡ್ ಸ್ಟೋರಿ’ ಮತ್ತೆ ತೆರೆಕಾಣ್ತಿದೆ. ಮೇ 12 ರ ಶುಕ್ರವಾರದಿಂದ ಹಿಂದಿ, ತಮಿಳು ಮತ್ತು ತೆಲುಗು ಭಾಷೆಗಳಲ್ಲಿ ಥಿಯೇಟರ್ ನಲ್ಲಿ ಮರು-ಬಿಡುಗಡೆಯಾಗಿದೆ.

ʼಎಂ.ಎಸ್. ಧೋನಿ: ದಿ ಅನ್‌ಟೋಲ್ಡ್ ಸ್ಟೋರಿ’ ಸ್ಟಾರ್ ಸ್ಟುಡಿಯೋಸ್‌ಗೆ ಮಾತ್ರವಲ್ಲದೆ ಪ್ರಪಂಚದಾದ್ಯಂತದ ಭಾರತೀಯರಿಗೆ ಅಸಾಧಾರಣವಾದ ವಿಶೇಷ ಚಲನಚಿತ್ರವಾಗಿದೆ. ಇದು ನಮ್ಮ ಅತ್ಯಂತ ಯಶಸ್ವಿ ಕ್ರಿಕೆಟ್ ನಾಯಕನ ಗಮನಾರ್ಹ ಹಾದಿಯನ್ನು ತೋರಿಸುತ್ತದೆ. ದೊಡ್ಡ ಪರದೆಯ ಮೇಲೆ ಕ್ರಿಕೆಟ್‌ನ ಕೆಲವು ಮಾಂತ್ರಿಕ ಕ್ಷಣಗಳನ್ನು ಮೆಲುಕು ಹಾಕಲು ಮತ್ತೊಂದು ಅವಕಾಶ ಎಂದು ಡಿಸ್ನಿ ಸ್ಟಾರ್‌ನ ಸ್ಟುಡಿಯೋಸ್ ಮುಖ್ಯಸ್ಥ ಬಿಕ್ರಮ್ ದುಗ್ಗಲ್ ಹೇಳಿದ್ದಾರೆ.

ದಿವಂಗತ ಸುಶಾಂತ್ ಸಿಂಗ್ ರಜಪೂತ್ ನಟಿಸಿದ ಬ್ಲಾಕ್‌ಬಸ್ಟರ್ ಚಲನಚಿತ್ರವು ಭಾರತದ ಅತ್ಯಂತ ಯಶಸ್ವಿ ಕ್ರಿಕೆಟ್ ನಾಯಕ ಧೋನಿಯ ಅಸಾಮಾನ್ಯ ಪ್ರಯಾಣವನ್ನು ಚಿತ್ರಿಸಿದೆ. ಚಿತ್ರದಲ್ಲಿ ಸುಶಾಂತ್ ಜೊತೆಗೆ ಕಿಯಾರಾ ಅಡ್ವಾಣಿ, ದಿಶಾ ಪಟಾನಿ, ಭೂಮಿಕಾ ಚಾವ್ಲಾ ಮತ್ತು ಅನುಪಮ್ ಖೇರ್ ನಟಿಸಿದ್ದಾರೆ. ಈ ಸಿನಿಮಾ 2016 ರಲ್ಲಿ ಅತ್ಯಂತ ಜನಪ್ರಿಯವಾಗಿತ್ತು. ಗಲ್ಲಾಪೆಟ್ಟಿಗೆಯಲ್ಲಿ 133 ಕೋಟಿ ರೂ. ಗಳಿಸಿತ್ತು. ಅಲ್ಲದೇ ಸುಶಾಂತ್ ಸಿಂಗ್ ರಜಪೂತ್ ರ ಅತ್ಯಂತ ಯಶಸ್ವಿ ಚಿತ್ರವಾಗಿದೆ.

https://youtu.be/NEHT_OKOLLY

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read