ಎಂಎಸ್ ಧೋನಿ ಅವರು ಸಾರ್ವಕಾಲಿಕ ಶ್ರೇಷ್ಠ ಕ್ರಿಕೆಟ್ ಆಟಗಾರರಲ್ಲಿ ಒಬ್ಬರೆಂದು ಏಕೆ ಪರಿಗಣಿಸಲ್ಪಟ್ಟಿದ್ದಾರೆ ಎಂಬುದನ್ನು ಐಪಿಎಲ್ 2023ರಲ್ಲಿ ಮತ್ತೊಮ್ಮೆ ಸಾಬೀತುಪಡಿಸಿದರು. ಮೊಣಕಾಲಿನ ಗಾಯದ ಹೊರತಾಗಿಯೂ, ಅವರು ತಮ್ಮ ತಂಡವನ್ನು ಮುನ್ನಡೆಸಿ, ಐದನೇ ಐಪಿಎಲ್ ಪ್ರಶಸ್ತಿಯನ್ನು ಎತ್ತಿ ಹಿಡಿದ್ರು.
ಧೋನಿ ಅವರು ಐಪಿಎಲ್‌ನಲ್ಲಿ ಮತ್ತೆ ಒಂದು ವರ್ಷ ಆಡಲು ಪ್ರಯತ್ನಿಸುವುದಾಗಿ ಘೋಷಿಸಿದ್ದಾರೆ. ಈ ಸುದ್ದಿಯು ಪ್ರಪಂಚದಾದ್ಯಂತದ ಅಭಿಮಾನಿಗಳನ್ನು ರೋಮಾಂಚನಗೊಳಿಸಿದೆ. ಆದರೂ ಧೋನಿ ದೀರ್ಘಕಾಲದಿಂದ ಮೊಣಕಾಲಿನ ಗಾಯದಿಂದ ಬಳಲುತ್ತಿದ್ದಾರೆ. ಹೀಗಾಗಿ ಅವರು ಶಸ್ತ್ರಚಿಕಿತ್ಸೆ ಮಾಡಿಕೊಳ್ಳಲು ಮುಂಬೈಗೆ ಆಗಮಿಸಿದ್ರು. ಈ ವೇಳೆ ಅವರು ಭಗವದ್ಗೀತೆ ಹಿಡಿದುಕೊಂಡು ಬಂದಿರುವ ಫೋಟೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.
ಬಹು ನಿರೀಕ್ಷಿತ ಐಪಿಎಲ್ 2023 ರ ಫೈನಲ್‌ನಲ್ಲಿ ಟಾಸ್ ಸೋತ ಗುಜರಾತ್ ಟೈಟಾನ್ಸ್ ಮೊದಲು ಬ್ಯಾಟಿಂಗ್ ತೆಗೆದುಕೊಂಡಿತು. ತಂಡದ ಅಗ್ರ ಕ್ರಮಾಂಕದ ಬ್ಯಾಟ್ಸ್‌ಮನ್‌ಗಳಾದ ಶುಭಮನ್ ಗಿಲ್, ವೃದ್ಧಿಮಾನ್ ಸಹಾ ಮತ್ತು ಸಾಯಿ ಸುದರ್ಶನ್ ತಮ್ಮ ಪ್ರಭಾವಿ ಪ್ರದರ್ಶನದಿಂದ ಉತ್ತಮ ರನ್ ಬಾರಿಸಿದ್ರು.
ಗುಜರಾತ್ 215 ರನ್‌ಗಳ ಬೃಹತ್ ಮೊತ್ತವನ್ನು ಕಲೆಹಾಕಿತು. ಮಳೆ ಅಡ್ಡಿಪಡಿಸಿದ್ರಿಂದ ಸಿ ಎಸ್ ಕೆಗೆ 15 ಓವರ್‌ಗಳಲ್ಲಿ 171 ರನ್‌ಗಳ ಗುರಿ ನೀಡಲಾಯಿತು. ಈ ಗುರಿಯನ್ನು ಬೆಂಬತ್ತಿದ್ದ ಸಿ ಎಸ್ ಕೆ ತಂಡ ಟ್ರೋಫಿ ಎತ್ತಿಹಿಡಿಯಿತು. ಇದರಲ್ಲಿ ಮಹೇಂದ್ರ ಸಿಂಗ್ ಧೋನಿ ಪಾತ್ರವೂ ದೊಡ್ಡದು. ತನ್ನ ಮೊಣಕಾಲು ಗಾಯವಿದ್ದರೂ ಲೆಕ್ಕಿಸದೆ ಆಡಿ, ತಂಡವನ್ನು ಮುನ್ನಡೆಸಿ ವಿಜಯಿಶಾಲಿಯಾಗಿದ್ದು ನಿಜಕ್ಕೂ ಗ್ರೇಟ್.
https://twitter.com/mufaddal_vohra/status/1664167875098312706?ref_src=twsrc%5Etfw%7Ctwcamp%5Etweetembed%7Ctwterm%5E1664167875098312706%7Ctwgr%5Efd9059473ced324ab280fa18d8f8fb89e37dada4%7Ctwcon%5Es1_&ref_url=https%3A%2F%2Fm.dailyhunt.in%2Fnews%2Findia%2Fenglish%2Fcricketcountry-epaper-dh062ee17f72d542b28faf77b89c2a0a75%2Fmsdhonispottedinmumbaiwithbhagavadgitaaheadofkneesurgerypicgoesviral-newsid-n505319614