ರಾಹುಲ್ ದ್ರಾವಿಡ್ ಬಳಿಕ ಎಂಎಸ್ ಧೋನಿ ಟೀಂ ಇಂಡಿಯಾ ಕ್ರೆಕೆಟ್ ತಂಡದ ಹೆಡ್ ಕೋಚ್?

ಭಾರತ ಕ್ರಿಕೆಟ್ ತಂಡದ ಮುಂದಿನ ಕೋಚ್ ಯಾರಾಗುತ್ತಾರೆ ಎಂಬ ಪ್ರಶ್ನೆಗೆ ಮಹೇಂದ್ರ ಸಿಂಗ್ ಧೋನಿ ಎಂಬ ಉತ್ತರ ಕೇಳಿಬರುತ್ತಿದೆ.

ಹಿಂದೂಸ್ತಾನ್ ಟೈಮ್ಸ್ ವರದಿಯ ಪ್ರಕಾರ ಧೋನಿ ರಾಹುಲ್ ದ್ರಾವಿಡ್ ಉತ್ತರಾಧಿಕಾರಿಯಾಗಬಹುದು . ಈ ಹಿಂದೆ ಚೆನ್ನೈ ಸೂಪರ್ ಕಿಂಗ್ಸ್ ಕೋಚ್ ಸ್ಟೀಫನ್ ಫ್ಲೆಮಿಂಗ್ ಅವರನ್ನೂ ಈ ಸ್ಥಾನಕ್ಕೆ ಪರಿಗಣಿಸಲಾಗುತ್ತಿದೆ ಎಂದು ವರದಿಯಾಗಿತ್ತು. ಆದರೆ ಇತ್ತೀಚಿನ ವರದಿಯು ಫ್ಲೆಮಿಂಗ್ ಈಗಾಗಲೇ ಫ್ರಾಂಚೈಸಿ ಕ್ರಿಕೆಟ್‌ನಲ್ಲಿ ಹೆಚ್ಚು ಸಕ್ರಿಯರಾಗಿದ್ದು 2027 ರವರೆಗೆ ಕೆಲಸವನ್ನು ತೆಗೆದುಕೊಳ್ಳಲು ಅವರು ಇಷ್ಟಪಡುವುದಿಲ್ಲ ಎಂಬುದು ತಿಳಿದುಬಂದಿದೆ.

“ಈ ಬಗ್ಗೆ ಫ್ಲೆಮಿಂಗ್ ನೇರವಾಗಿ ಇಲ್ಲ ಎಂದು ಹೇಳಿಲ್ಲ. ಅವರು ಒಪ್ಪಂದದ ಅವಧಿಯ ಬಗ್ಗೆ ತಮ್ಮ ಕಳವಳವನ್ನು ವ್ಯಕ್ತಪಡಿಸಿದ್ದಾರೆ, ಇದು ಅಸಾಮಾನ್ಯ ಏನೂ ಅಲ್ಲ. ರಾಹುಲ್ ದ್ರಾವಿಡ್ ಕೂಡ ಆರಂಭದಲ್ಲಿ ಉತ್ಸುಕರಾಗಿರಲಿಲ್ಲ. ಬಳಿಕ ಅವರ ಮನವೊಲಿಸಲಾಯಿತು. ಫ್ಲೆಮಿಂಗ್‌ ಕೂಡ ರಾಹುಲ್ ದ್ರಾವಿಡ್ ರಂತೆ ಒಪ್ಪಿಕೊಂಡರೆ ಆಶ್ಚರ್ಯವೇನಿಲ್ಲ. ಮೇಲಾಗಿ ಎಂಎಸ್ ಧೋನಿಗಿಂತ ಈ ಸ್ಥಾನಕ್ಕೆ ಯಾರು ಉತ್ತಮ? ಎಂದು ಬಿಸಿಸಿಐ ಮೂಲವೊಂದು ಹಿಂದೂಸ್ತಾನ್ ಟೈಮ್ಸ್ ಗೆ ತಿಳಿಸಿದೆ ಎಂಬುದು ಗೊತ್ತಾಗಿದೆ.

ಕೆಲವು ದಿನಗಳ ಹಿಂದೆ ಐಪಿಎಲ್ 2024 ರಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಮಹೇಂದ್ರ ಸಿಂಗ್ ಧೋನಿ, ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ತಮ್ಮ ಕೊನೆಯ ಲೀಗ್ ಪಂದ್ಯದಲ್ಲಿ ಸೋತಿದ್ದರಿಂದ ಪ್ಲೇಆಫ್‌ಗೆ ಅರ್ಹತೆ ಪಡೆಯಲು ಸಾಧ್ಯವಾಗಲಿಲ್ಲ.

ಅತ್ಯಂತ ಯಶಸ್ವಿ ಭಾರತೀಯ ನಾಯಕರಾಗಿರುವ ಧೋನಿ, 2021 ರಲ್ಲಿ ಭಾರತದ ಟಿ20 ವಿಶ್ವಕಪ್ ತಂಡದ ಮಾರ್ಗದರ್ಶಕರಾಗಿದ್ದರು. ಇದು ಭಾರತಕ್ಕೆ ಪ್ರಶಸ್ತಿ ಗೆಲ್ಲಲು ಸಹಾಯ ಮಾಡದಿದ್ದರೂ, ಧೋನಿ ನಿಜವಾಗಿಯೂ ಕೋಚ್ ಹುದ್ದೆಯನ್ನು ತೆಗೆದುಕೊಳ್ಳುತ್ತಾರೆಯೇ ಎಂಬುದು ಕುತೂಹಲಕಾರಿಯಾಗಿದೆ.
ಈ ಐಪಿಎಲ್ ಋತುವಿನಲ್ಲಿ ಧೋನಿ 14 ಪಂದ್ಯಗಳ 11 ಇನ್ನಿಂಗ್ಸ್ ಗಳಲ್ಲಿ 220.54 ಸ್ಟ್ರೈಕ್ ರೇಟ್ ಮತ್ತು 53.67 ಸರಾಸರಿಯಲ್ಲಿ 161 ರನ್ ಗಳಿಸಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read