ಸೋಶಿಯಲ್ ಮೀಡಿಯಾಗೆ ಮರಳಿ ಬಂದ ಧೋನಿ; ಟ್ರ್ಯಾಕ್ಟರ್‌ನಲ್ಲಿ ಉಳುಮೆ ಮಾಡುವುದನ್ನ ನೋಡಿ ಅಭಿಮಾನಿಗಳು ಫುಲ್ ಖುಷ್

Nice to learn something new” – MS Dhoni drives tractorಟೀಂ ಇಂಡಿಯಾ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಯಾರಿಗೆ ಗೊತ್ತಿಲ್ಲ ಹೇಳಿ. ಇವರು ಕ್ರಿಕೆಟ್ ಅಂಗಳಕ್ಕೆ ಇಳಿದರೆ ಸಾಕು ಕ್ರಿಕೆಟ್ ಪ್ರೇಮಿಗಳಿಗೆ ರನ್‌ಗಳ ಹಬ್ಬವಾದಂತಿರುತ್ತೆ.

ಸಾಮಾನ್ಯವಾಗಿ ಕ್ರಿಕೆಟ್ ಆಟಗಾರರು ಸೋಶಿಯಲ್ ಮಿಡಿಯಾದಲ್ಲಿ ಸಖತ್ ಆಕ್ಟಿವ್ ಆಗಿರ್ತಾರೆ. ಆದರೆ ಇಂಡಿಯನ್‌ ಕ್ರಿಕೆಟ್ ಟೀಂನ ಮಾಜಿ ನಾಯಕ ಸಾಮಾಜಿಕ ಜಾಲತಾಣಗಳಲ್ಲಿ ಅಷ್ಟಾಗಿ ಕಾಣಿಸಿಕೊಳ್ಳುವುದಿಲ್ಲ.

ಆದರೆ ಈಗ ಅಂದರೆ, ಎರಡು ವರ್ಷಗಳ ನಂತರ ಭಾರತ ತಂಡದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಇನ್ಯಾಗ್ರಾಮ್ ಗೆ ಮರಳಿದ್ದಾರೆ. ಇದರಲ್ಲಿ ಹೊಸ ವೀಡಿಯೊವೊಂದನ್ನು ಧೋನಿ ಹಂಚಿಕೊಂಡಿದ್ದು ಅದರಲ್ಲಿ ರಾಂಚಿಯಲ್ಲಿರುವ ತಮ್ಮ ಫಾರ್ಮ್ ಹೌಸ್ ನಲ್ಲಿ ಹೊಲವನ್ನು ಉಳುಮೆ ಮಾಡಲು ಟ್ರ್ಯಾಕ್ಟರ್ ಓಡಿಸುತ್ತಿರುವುದನ್ನು ಕಾಣಬಹುದು.

ಧೋನಿ ಸೋಶಿಯಲ್ ಮೀಡಿಯಾದಲ್ಲಿ ಮತ್ತೆ ಕಾಣಿಸಿಕೊಂಡಿರುವುದು ಅವರ ಅಭಿಮಾನಿಗಳಿಗೆ ಖುಷಿ ಕೊಟ್ಟಿದೆ. ಈ ವೀಡಿಯೋದಲ್ಲಿ ಪಕ್ಕಾ ರೈತನಂತೆ ಕಾಣಿಸಿಕೊಂಡಿರುವ ಧೋನಿ, ‘ಹೊಸದನ್ನು ಕಲಿಯಲು ಸಂತೋಷವಾಗಿದೆ, ಆದರೆ ಕೆಲಸವನ್ನು ಮುಗಿಸಲು ತುಂಬಾ ಸಮಯ ತೆಗೆದುಕೊಂಡಿತು.’ ಎಂದು ಬರೆದುಕೊಂಡಿದ್ದಾರೆ.

ಎಂಎಸ್ ಧೋನಿ ಅವರು ಜಮೀನಿನಲ್ಲಿ ಟ್ರ್ಯಾಕ್ಟರ್ ಓಡಿಸುತ್ತಿದ್ದು, ಸ್ವಲ್ಪ ಸಮಯದ ನಂತರ ಟ್ರ್ಯಾಕ್ಟರ್ ನಲ್ಲಿ ಅವರೊಂದಿಗೆ ಇನ್ನೊಬ್ಬ ವ್ಯಕ್ತಿ ಕುಳಿತಿರುವುದನ್ನು ಕಾಣಬಹುದು.

ಇತ್ತೀಚಿನ ದಿನಗಳಲ್ಲಿ ಧೋನಿ, ಬೇರೆ ಬೇರೆ ಗೆಟಪ್‌ಗಳಲ್ಲಿ ಆಗಾಗ ಕಾಣಿಸಿಕೊಳ್ತಾನೇ ಇರ್ತಾರೆ. ಈ ಹಿಂದೆ ಪೊಲೀಸ್ ಗೆಟಪ್‌ನಲ್ಲಿ ಕಾಣಿಸಿಕೊಂಡಿದ್ದು, ಕೈಯಲ್ಲಿ ಗನ್ ಹಿಡಿದಿದ್ದ ಅವರ ಫೋಟೋ ನೋಡಿ ಎಲ್ಲರೂ ಬೆರಗಾಗಿದ್ದರು. ಆದರೆ ಏನೇ ಹೇಳಿ ಧೋನಿ ಬ್ಯಾಟ್ ಹಿಡಿದು ಆಟ ಆಡೋದನ್ನ ನೋಡೋದೇ ಚೆಂದ. ಅದಕ್ಕಾಗಿ ಐಪಿಎಲ್ ಶುರುವಾಗುವ ತನಕ ಕಾಯಲೇಬೇಕು. ಧೋನಿ ಚೆನ್ನೈ ತಂಡದ ನಾಯಕರಾಗಿ ಆಟ ಆಡುತ್ತಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read