ಭಾರತ ತಂಡದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಸಿನಿರಂಗಕ್ಕೆ ಧುಮುಕಿದ್ದು ತಮ್ಮ ಚೊಚ್ಚಲ ನಿರ್ಮಾಣದ ಚಿತ್ರ ‘LGM’ (ಲೆಟ್ಸ್ ಗೆಟ್ ಮ್ಯಾರೀಡ್) ಆಡಿಯೋ ಮತ್ತು ಟ್ರೇಲರ್ ಬಿಡುಗಡೆಗಾಗಿ ಚೆನ್ನೈಗೆ ಆಗಮಿಸಿದರು. ಈ ವೇಳೆ ಅವರನ್ನು ಅಭಿಮಾನಿಗಳ ದಂಡು ಅದ್ಧೂರಿಯಾಗಿ ಸ್ವಾಗತಿಸಿದೆ. ತಮ್ಮ ಕ್ರಿಕೆಟ್ ನಿಂದಾಗಿ ಕೋಟ್ಯಂತರ ಅಭಿಮಾನಿಗಳನ್ನು ಹೊಂದಿರುವ ಧೋನಿ ಚೆನ್ನೈ ವಿಮಾನ ನಿಲ್ದಾಣಕ್ಕೆ ಬಂದಿಳಿಯುತ್ತಿದ್ದಂತೆ ಏರ್ ಪೋರ್ಟ್ ನಲ್ಲಿ ಜಮಾಯಿಸಿದ್ದ ಅಭಿಮಾನಿಗಳು ಪುಷ್ಪವೃಷ್ಟಿ ಸುರಿಸಿ ಧೋನಿಯನ್ನು ಸ್ವಾಗತಿಸಿದರು.
ಎಲ್‌ಜಿಎಂ ಧೋನಿ ಎಂಟರ್‌ಟೈನ್‌ಮೆಂಟ್ ಪ್ರೈವೇಟ್ ಲಿಮಿಟೆಡ್‌ನ ಮೊದಲ ಚಲನಚಿತ್ರವಾಗಿದ್ದು ಹರೀಶ್ ಕಲ್ಯಾಣ್, ಇವಾನಾ, ನದಿಯಾ, ಯೋಗಿ ಬಾಬು ಮತ್ತು ಮಿರ್ಚಿ ವಿಜಯ್ ನಟಿಸಿದ್ದಾರೆ. ಧೋನಿ ನಿರ್ಮಾಣದ ಚೊಚ್ಚಲ ಚಿತ್ರವನ್ನ ರಮೇಶ್ ತಮಿಳ್ಮಣಿ ನಿರ್ದೇಶಿಸಿದ್ದಾರೆ.
ತಮ್ಮ ನಿರ್ಮಾಣದ ಮೊದಲ ತಮಿಳು ಸಿನಿಮಾದ ಟ್ರೇಲರ್ ಬಿಡುಗಡೆ ಸಮಾರಂಭದಲ್ಲಿ ಪಾಲ್ಗೊಳ್ಳಲು ಧೋನಿ ತಮ್ಮ ಪತ್ನಿ ಸಾಕ್ಷಿ ಅವರೊಂದಿಗೆ ಚೆನ್ನೈಗೆ ಆಗಮಿಸಿದರು.
ಜುಲೈ 7 ರಂದು ಧೋನಿ ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದು, ಸಾಮಾಜಿಕ ಜಾಲತಾಣದಲ್ಲಿ ಅಪಾರ ಅಭಿಮಾನಿಗಳು ಅವರಿಗೆ ಶುಭಾಶಯ ಕೋರಿದ್ದರು.
https://twitter.com/CSKFansOfficial/status/1678057915868119041?ref_src=twsrc%5Etfw%7Ctwcamp%5Etweetembed%7Ctwterm%5E1678057915868119041%7Ctwgr%5E8692bcdd2d778266f31e9539b4f3f75e36d2ac66%7Ctwcon%5Es1_&ref_url=https%3A%2F%2Fwww.republicworld.com%2Fsports-news%2Fcricket-news%2Fms-dhoni-gets-thunderous-welcome-in-chennai-ahead-of-lgm-trailer-launch-watch-articleshow.html