ಲೂಸ್ ಮಾದ ಯೋಗಿ ಅಭಿನಯದ ‘ಸಿದ್ಲಿಂಗು 2’ ಚಿತ್ರ ಮುಂದಿನ ತಿಂಗಳು ಫೆಬ್ರವರಿ 14ರ ಪ್ರೇಮಿಗಳ ದಿನದಂದು ಬಿಡುಗಡೆಗೆ ಸಿದ್ಧವಾಗಿದೆ. ಈ ಚಿತ್ರದ ಆಡಿಯೋ ಹಕ್ಕನ್ನು M.R.T ಮ್ಯೂಸಿಕ್ ಪಡೆದುಕೊಂಡಿದ್ದು, ಭಾರಿ ಮೊತ್ತಕ್ಕೆ ಖರೀದಿ ಮಾಡಿದೆ.
ವಿಜಯಪ್ರಸಾದ್ ನಿರ್ದೇಶನದ ಈ ಚಿತ್ರದಲ್ಲಿ ಲೂಸ್ ಮಾದ ಅವರಿಗೆ ಜೋಡಿಯಾಗಿ ಸೋನು ಗೌಡ ಅಭಿನಯಿಸಿದ್ದು, ನಿಹಾರಿಕಾ ಮೂವೀಸ್ ಲಾಂಛನದಲ್ಲಿ ಶ್ರೀಹರಿ ರೆಡ್ಡಿ ಮತ್ತು ರಾಜು ಶೇರೆಗಾರ್ ನಿರ್ಮಾಣ ಮಾಡಿದ್ದಾರೆ.
ಇನ್ನುಳಿದಂತೆ ಮಂಜುನಾಥ್ ರಾಧಾಕೃಷ್ಣ, ವಿಜಯಪ್ರಸಾದ್, ಯೋಗೇಶ್ ಸಹ ನಿರ್ಮಾಪಕರಾಗಿ ಕೆಲಸ ಮಾಡಿದ್ದಾರೆ. ಅಕ್ಷಯ್ ಪಿ ರಾವ್ ಸಂಕಲನ ಮತ್ತು ಪ್ರಸನ್ನ ಛಾಯಾಗ್ರಹಣವಿದೆ. ಜೆ. ಅನೂಪ್ ಸೀಳಿನ್ ಸಂಗೀತ ಸಂಯೋಜನೆ ನೀಡಿದ್ದಾರೆ.
2012ರಲ್ಲಿ ಬಿಡುಗಡೆಯಾಗಿದ್ದ ಲೂಸ್ ಮಾದ ಯೋಗಿ ಹಾಗೂ ಮೋಹಕ ತಾರೆ ರಮ್ಯಾ ಅಭಿನಯದ ಸಿದ್ಲಿಂಗು ಸಿನಿಮಾ ಭರ್ಜರಿ ಯಶಸ್ಸು ಕಂಡಿತ್ತು. ಇದೀಗ ಇದರ ಮುಂದುವರೆದ ಭಾಗ ‘ಸಿದ್ಲಿಂಗು 2’ ಕೂಡ ಸಾಕಷ್ಟು ನಿರೀಕ್ಷೆ ಮೂಡಿಸಿದ್ದು, ಇನ್ನೇನು ಶೀಘ್ರದಲ್ಲೇ ಇದರ ಟ್ರೈಲರ್ ರಿಲೀಸ್ ಆಗುವ ಸಾಧ್ಯತೆ ಇದೆ.